alex Certify ವಿಡಿಯೋದಲ್ಲಿ ಸೆರೆಯಾಗಿದೆ ವಿಸ್ಮಯಕಾರಿ ಘಟನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋದಲ್ಲಿ ಸೆರೆಯಾಗಿದೆ ವಿಸ್ಮಯಕಾರಿ ಘಟನೆ…!

ಬೆಚ್ಚಿ ಬೀಳಿಸುವ ವಿಡಿಯೋವೊಂದರಲ್ಲಿ, ಭಾರೀ ತೂಕದ ಬಾಗಿಲೊಂದು ತನ್ನಿಂತಾನೇ ಮುಚ್ಚಿಕೊಳ್ಳುವ ಮೂಲಕ ಸಂಚಲನ ಮೂಡಿಸುತ್ತಿದೆ. ಹ್ಯಾಂಪ್‌ಶೈರ್‌ನ ಪಾಳು ಕೋಟೆಯೊಂದರಲ್ಲಿ ಗಾಳಿ ಆಡದೇ ಇದ್ದರೂ ಸಹ ಈ ಬಾಗಿಲು ತಾನಾಗೇ ಚಲಿಸುತ್ತಿದೆ.

ಈ ರೀತಿ ಆಗುತ್ತಿದೆ ಎಂದು ವದಂತಿಗಳನ್ನು ಕೇಳಿದ ಬಳಿಕ ಖುದ್ದು ಪರೀಕ್ಷಿಸಿ ನೋಡಿಯೇ ಬಿಡುವ ಎಂದು ಮುಂದಾದ ಟೋನಿ ಫರ್ಗೂಸನ್ ಹಾಗೂ ಪೌಲ್ ಸಿಸೆಲ್ ಎಂಬ ಆಸಕ್ತರು ತಮ್ಮ ನಾಯಿ ಸ್ಯಾಮ್‌ನೊಂದಿಗೆ ಈ ಕೋಟೆಗೆ ಧಾವಿಸಿದ್ದಾರೆ.

ಕ್ಯಾಮೆರಾ ಒಂದನ್ನು ಈ ಬಾಗಿಲಿನ ಬಳಿ ಇಟ್ಟು, ಅದರ ವಿಡಿಯೋ ಫುಟೇಜ್ ಚಿತ್ರೀಕರಿಸಿಕೊಂಡ ಈ ಇಬ್ಬರಿಗೂ, ಆ ಬಾಗಿಲು ತನ್ನಿಂತಾನೇ ಮುಚ್ಚಿಕೊಳ್ಳುತ್ತಿರುವುದು ಖಾತ್ರಿಯಾಗಿದೆ.

ಆ ಸುರಂಗದ ಬಳಿ ಗಾಳಿಯ ಚಲನೆಯಾಗಲೀ ಅಥವಾ ಶಬ್ದವಾಗಲೀ ಇಲ್ಲದೇ ಇರುವುದೂ ಸಹ ಇದೇ ವೇಳೆ ತಿಳಿದುಬಂದಿದೆ. ಬಳಿಕ ಇದೊಂದು ವಿಸ್ಮಯಕಾರೀ ಘಟನೆಯಾಗಿದೆ ಎಂದು ಸ್ವತಃ ಈ ಇಬ್ಬರೂ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...