ಕರಿಯರ ಮೇಲಿನ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಹೊಸ ರೀತಿಯ ಪ್ರತಿಭಟನೆಗಳತ್ತ ಹೊರಳುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ನಿವಾಸ ವೈಟ್ ಹೌಸ್ ನತ್ತ ದಾಳಿ ಇಟ್ಟ ಅನೇಕರು, ಸಿಟ್ಟು ಹೊರಹಾಕಿದ್ದಾರೆ.
ಬೀದಿಗಿಳಿದು ಹೋರಾಡುವ ಸ್ಥಿತಿ ಇಲ್ಲದ್ದರಿಂದ ಸಾಮಾಜಿಕ ಜಾಲತಾಣಗಳನ್ನೂ ಹೋರಾಟಕ್ಕೆ ಬಳಸಿಕೊಂಡು ಅಭಿಯಾನಗಳು ನಡೆಯುತ್ತಿವೆ.
ಬೇಬಿನೇಮ್ಸ್.ಕಾಂ ವೆಬ್ ಸೈಟ್ ಮೂಲಕ ನೂತನ ಅಭಿಯಾನ ಶುರುವಾಗಿದೆ. ಜನಾಂಗೀಯ ದಾಳಿಗೆ ಬಲಿಯಾದವರ ಹೆಸರುಗಳನ್ನು ವೆಬ್ ಸೈಟ್ ನಲ್ಲಿ ಹಾಕಲಾಗುತ್ತಿದ್ದು, ಇವರೆಲ್ಲರೂ ಬೇರೊಬ್ಬರ ಮಕ್ಕಳೇ ಆಗಿದ್ದರು. ಹೀಗಾಗಿ ಹುಟ್ಟುವ ಮಕ್ಕಳಿಗೆ ಈ ಹೆಸರುಗಳನ್ನು ಇಡಲು ಜನರನ್ನು ಪ್ರೇರೇಪಿಸಲಾಗುತ್ತಿದೆ ಎನ್ನಲಾಗಿದೆ.