alex Certify ಪ್ರತಿಭಟನಾಕಾರರ ಖಾಸಗಿತನ ರಕ್ಷಿಸುತ್ತೆ ಈ ಕಿರು ತಂತ್ರಾಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಭಟನಾಕಾರರ ಖಾಸಗಿತನ ರಕ್ಷಿಸುತ್ತೆ ಈ ಕಿರು ತಂತ್ರಾಂಶ

Anonymous Camera is the New App Protecting Protesters' Privacy in ...

Black Lives Matter ಪ್ರತಿಭಟನೆಗಳು ಸಾಗುತ್ತಲೇ ಇರುವಂತೆಯೇ, ಪ್ರತಿಭಟನಾಕಾರರ ಮುಖಗಳನ್ನು ಗುರುತು ಹಿಡಿಯಲು ಖುದ್ದು ಅವರೇ ತೆಗೆದುಕೊಂಡ ಫೋಟೋಗಳನ್ನು ಪೊಲೀಸರು ಶೋಧಿಸುತ್ತಿದ್ದಾರೆ.

ಪ್ರತಿಭಟನೆ ಸೋಗಿನಲ್ಲಿ ಸಿಕ್ಕ ಸಿಕ್ಕದನ್ನೆಲ್ಲಾ ಲೂಟಿ ಮಾಡುವ ಕೆಲ ದಗಾಕೋರರನ್ನು ಪತ್ತೆ ಮಾಡಲು ಪೊಲೀಸರಿಗೆ ಈ ಕ್ಯಾಮೆರಾಗಳೇ ನೆರವಾಗುತ್ತಿವೆ. ಇದೇ ವೇಳೆ ಉದ್ದೇಶಪೂರಿತವಾಗಿ ಪೊಲೀಸರು ಕೆಲ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಪ್ರತಿಭಟನಾಕಾರರನ್ನು ಗುರುತು ಹಿಡಿಯದಂತೆ ಮಾಡಲು ಹೊಸ ಕಿರು ತಂತ್ರಾಂಶವೊಂದನ್ನು ಬಿಡುಗಡೆ ಮಾಡಲಾಗಿದೆ. Anonymous Camera ಹೆಸರಿನ ಈ ಹೊಸ ತಂತ್ರಾಂಶವನ್ನು iOS App Store ಶುಕ್ರವಾರ ಬಿಡುಗಡೆ ಮಾಡಿದೆ. ಇದರ ಮೂಲಕ ಪ್ರತಿಭಟನಾಕಾರರ ಮುಖಗಳನ್ನು ಸಂಪೂರ್ಣವಾಗಿ ಬ್ಲಾಕ್ ಔಟ್ ಮಾಡಬಹುದಾಗಿದ್ದು, ಅವರ ಖಾಸಗೀತನವನ್ನು ರಕ್ಷಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೇ ಪ್ರತಿಭಟನಾಕಾರರ ದನಿಯನ್ನೂ ಸಹ ಈ ಕಿರು ತಂತ್ರಾಂಶ ರೂಪಾಂತರಗೊಳಿಸುವ ಮೂಲಕ ಅವರ ಖಾಸಗೀತನಕ್ಕೆ ಸಂಪೂರ್ಣ ರಕ್ಷಣೆ ನೀಡುವ ಉದ್ದೇಶ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...