alex Certify ದುಬಾರಿ ಬೆಲೆಗೆ ಹರಾಜಾಗಲಿದೆ ‘Black Lives Matter’ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಬೆಲೆಗೆ ಹರಾಜಾಗಲಿದೆ ‘Black Lives Matter’ ಚಿತ್ರ

ಲಂಡನ್‌ನಲ್ಲಿ ನಡೆದ ‘Black Lives Matter’ ಅಭಿಯಾನದ ಮುಖಚಿತ್ರವಾಗಿ ಕಾಣುತ್ತಿರುವ ಯುವ ಕಾರ್ಯಕರ್ತೆಯೊಬ್ಬಳ ಕಪ್ಪು ಬಿಳುಪು ಚಿತ್ರವೊಂದನ್ನು ಅಕ್ಟೋಬರ್‌ 7ರಂದು ಸೋಥೆಬೆ ಮ್ಯೂಸಿಯಮ್‌ನಲ್ಲಿ ಹರಾಜಿಗೆ ಇಡಲಾಗುವುದು.

ಮಿಸನ್ ಹ್ಯಾರಿಮನ್ ಕ್ಲಿಕ್ ಮಾಡಿದ ಈ ಚಿತ್ರದಲ್ಲಿರುವ ಯುವತಿ, “Why Is Ending Racism a Debate?” (ಜನಾಂಗೀಯ ದ್ವೇಷ ಅಂತ್ಯಗೊಳಿಸಲು ಚರ್ಚೆ ಏಕೆ?) ಎಂಬ ಪ್ಲಾಕಾರ್ಡ್‌ ಹಿಡಿದು ನಿಂತಿದ್ದರೆ ಆಕೆಯ ಹಿಂದೆ ಇರುವ ವ್ಯಕ್ತಿಯೊಬ್ಬರು ಇದಕ್ಕೆ ಬೆಂಬಲ ಕೊಡುತ್ತಾ ಮುಷ್ಠಿಯನ್ನು ಏರಿಸಿದಂತೆ ಕಾಣುತ್ತಿದೆ.

ಈ ಚಿತ್ರವನ್ನು ಹರಾಜಿನಲ್ಲಿ 2.8 ಲಕ್ಷದಿಂದ 4.7 ಲಕ್ಷ ರೂ.ಗಳವರೆಗೆ ಬೆಲೆ ಕೊಟ್ಟು ಮಾರಾಟ ಮಾಡುವ ಸಾಧ್ಯತೆ ಇದೆ. ಈ ಸೇಲ್‌ನಲ್ಲಿ ಬಂದ ದುಡ್ಡನ್ನು ರಕ್ತ ಕ್ಯಾನ್ಸರ್‌ ಪೀಡಿತರ ನೆರವಿಗೆ ನೀಡಲಾಗುವುದಂತೆ. ಅಮೆರಿಕದ ಮಿನಿಯಾಪೊಲಿಸ್‌ನಲ್ಲಿ ಜಾರ್ಜ್ ಫ್ಲಾಯ್ಡ್‌ ಎಂಬ ವ್ಯಕ್ತಿಯ ಕೊಲೆಗೆ ಪೊಲೀಸರು ಕಾರಣರಾದ ಬಳಿಕ ಈ ಅಭಿಯಾನ ದೊಡ್ಡದಾಗಿ ಜರುಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...