alex Certify ಕೋವಿಡ್-19 ನಿರ್ಬಂಧದ ವಿರುದ್ಧ ʼಲಿಪ್‌ ಲಾಕ್ʼ‌ ಮಾಡಿ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ನಿರ್ಬಂಧದ ವಿರುದ್ಧ ʼಲಿಪ್‌ ಲಾಕ್ʼ‌ ಮಾಡಿ ಪ್ರತಿಭಟನೆ

ಜಗತ್ತಿನಾದ್ಯಂತ ಕೋವಿಡ್-19 ಸೋಂಕಿನ ಕಾಟ ಒಂದು ಕಡೆ ಆದರೆ, ಅದರ ಬಗ್ಗೆ ಅತಿರಂಜಿತ ಸುದ್ದಿಗಳು, ಜಾಹೀರಾತುಗಳು ಮತ್ತು ವಿಪರೀತ ಎನ್ನಬಹುದಾದ ನಿರ್ಬಂಧಗಳ ರೋದನೆ ಮತ್ತೊಂದು ಕಡೆ.

ಇಂಥ ಪರಿಸ್ಥಿತಿಯಲ್ಲಿ ಕೆಲವು ಮಂದಿ ಕೋವಿಡ್-19 ನಿರ್ಬಂಧಗಳಿಗೆ ತಾವು ಕೇರ್‌ ಮಾಡೋದಿಲ್ಲ ಎಂದು ತೋರಿಸಲು ಟಾಯ್ಲೆಟ್‌ ಸೀಟುಗಳನ್ನು ನೆಕ್ಕುವಂಥ ವಿಕೃತ ಮೋಜಿಗೆ ಮುಂದಾದ ನಿದರ್ಶನಗಳ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಓದಿದ್ದೇವೆ. ಇದೀಗ ಈ ಲಾಕ್‌ಡೌನ್, ಸಾಮಾಜಿಕ ಅಂತರ ಹಾಗೂ ಕ್ವಾರಂಟೈನ್‌ ನಿರ್ಬಂಧಗಳ ವಿರುದ್ಧ ಜನ ತಮ್ಮ ಹತಾಶೆಗಳನ್ನು ಹಲವಾರು ರೀತಿಯಲ್ಲಿ ಹೊರ ಹಾಕುತ್ತಿದ್ದಾರೆ.

ಕಿಕ್ಕಿರಿದ ಮೆಟ್ರೋ ರೈಲುಗಳಲ್ಲಿ ಪರಸ್ಪರ ಚುಂಬಿಸಿಕೊಳ್ಳುವ ಮೂಲಕ ಕೋವಿಡ್-19 ನಿರ್ಬಂಧಗಳಿಗೆ ಸವಾಲೆಸೆಯುವ ಕೆಲಸವನ್ನು ಒಂದಷ್ಟು ಜೋಡಿಗಳು ಮಾಡಿದ ಘಟನೆ ರಷ್ಯಾದಲ್ಲಿ ಜರುಗಿದೆ. ರಷ್ಯಾದ ಯಕಾಟರಿನ್‌ಬರ್ಗ್‌ನಲ್ಲಿ ಈ ಜೋಡಿಗಳು ಲಿಪ್‌ಲಾಕ್‌ ಮಾಡಿಕೊಳ್ಳುತ್ತಿರುವ ದೃಶ್ಯಾವಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...