alex Certify ಸಾರ್ವಜನಿಕರನ್ನು ಸೆಳೆಯಲು ಉಡುಗೊರೆ ತರ್ತಿದೆ ಈ ಡಾಲ್ಫಿನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರನ್ನು ಸೆಳೆಯಲು ಉಡುಗೊರೆ ತರ್ತಿದೆ ಈ ಡಾಲ್ಫಿನ್…!

ಕೊರೋನಾ ಲಾಕ್‌ಡೌನ್ ನಿಂದ‌ ಜನ ಬೇಸರಗೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಜನರ ಒಡನಾಟವಿಲ್ಲದೆ ಇಲ್ಲೊಂದು ಡಾಲ್ಫಿನ್‌ ಕೂಡ ಬೇಸರಗೊಂಡಿದೆ.‌…!!

ಹೌದು, ಜನಸ್ನೇಹಿ ಡಾಲ್ಫಿನ್ ಒಂದು, ಸಮುದ್ರದಾಳದಿಂದ ಸಾಕಷ್ಟು ಉಡುಗೊರೆಗಳನ್ನು ದಡಕ್ಕೆ ತಂದಿಡುವ ಮೂಲಕ ತನ್ನ ಬೇಸರ ವ್ಯಕ್ತಪಡಿಸುತ್ತಿದೆ.‌

‌ಕ್ವೀನ್ಸ್ ಲ್ಯಾಂಡ್ ನ ಕೂಲೂಲಾ ಕಡಲ ತೀರ ಟಿನ್ ಕ್ಯಾನ್ ಬೇ 29 ವರ್ಷದ ಗಂಡು ಡಾಲ್ಫಿನ್ ಮೈಸ್ಟಿಕಿಯ ವರ್ತನೆಯಿಂದ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿತ್ತು.

ಅದಕ್ಕೆ ಆಹಾರ ಹಾಕುವ ಬರ್ನಾಕಲ್ಸ್ ಕೆಫೆಯ ಸ್ವಯಂ ಸೇವಕರಿಗೆ ಸಮುದ್ರದಾಳದಿಂದ ಉಡುಗೊರೆ ತಂದು ನೀಡುತ್ತಿತ್ತು. ಲಾಕ್‌ಡೌನ್ ಆಗಿ ಜನರ ಭೇಟಿ ಕಡಿಮೆಯಾದಾಗಿನಿಂದ ಡಾಲ್ಫಿನ್ ನ ಉಡುಗೊರೆ ತರುವ ಕಾರ್ಯ ದ್ವಿಗುಣಗೊಂಡಿದೆ.

ಸಮುದ್ರದಾಳದಿಂದ ಹವಳದ ಬಂಡೆಗಳು, ಹಳೆಯ ಬಾಟಲ್ ಗಳನ್ನು ಹೆಕ್ಕಿ ತಂದು ದಡಕ್ಕೆ ಇಡುತ್ತಿರುವ ಮೈಸ್ಟಿಕಿ ಜನರಿಲ್ಲದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದೆ ಎಂದು ಬರ್ನಾಕಲ್ ಕೆಫೆ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದೆ.‌ ಮೈಸ್ಟಿಕಿ ಉಡುಗೊರೆ ತರುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.

The pod has been bringing us regular gifts, showing us how much they’re missing the public interaction and attention☹️…

Posted by Barnacles Cafe & Dolphin Feeding on Monday, May 18, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...