ನಾಯಿಗಳು ಸ್ಮಾರ್ಟ್ ನೆಸ್ ತೋರಿಸುವುದಕ್ಕೆ ಹಲವು ಉದಾಹರಣೆ ನೋಡಿರುತ್ತೇವೆ, ಕೇಳಿರುತ್ತೇವೆ. ಇಲ್ಲೊಂದು ನಾಯಿ ಪ್ರಾಂಕ್ ನಂಬಿ ಸ್ಥಳ ಬಿಟ್ಟು ಕದಲಿದ ವಿಡಿಯೋ ಟಿಕ್ ಟಾಕ್ ನಲ್ಲಿ ಸದ್ದು ಮಾಡಿದೆ.
ತಾರಾನೇಕ್ ಎಂಬ ಟಿಕ್ ಟಾಕ್ ಬಳಕೆದಾರ ಶೇರ್ ಮಾಡಿರುವ ವಿಡಿಯೋದಲ್ಲಿ, ಕಪ್ಪುಬಣ್ಣದ ನಾಯಿಯೊಂದು ಬಿಸ್ಕೆಟ್ ಬಾಯಲ್ಲಿ ಕಚ್ಚಿಕೊಂಡು ಕುಳಿತಿರುತ್ತದೆ, ಅದರ ಮುಂಭಾಗ ವ್ಯಕ್ತಿಯೊಬ್ಬರು ನಾಯಿಯಾಕಾರದ ಗೊಂಬೆಯನ್ನು ತಂದು ನಾಯಿಗಿಟ್ಟಿದ್ದ ಬಟ್ಟಲೊಳಗೆ ತಲೆ ಹಾಕಿಸಿ, ಆ ಗೊಂಬೆ ನೆಕ್ಕುರುಳಿಸುತ್ತಾರೆ. ಆ ಕಪ್ಪು ನಾಯಿ ತಕ್ಷಣವೇ ತನ್ನ ಬಾಯಲ್ಲಿದ್ದ ಬಿಸ್ಕತ್ತನ್ನು ಕೆಳಗೆ ಬೀಳಿಸಿ ಸ್ಥಳದಿಂದ ಕಾಲ್ಕಿಳುತ್ತದೆ.
ಈ ವಿಡಿಯೋಗೆ 8.2 ಲಕ್ಷ ಲೈಕ್ ಗಳು ಬಂದಿದ್ದು, ಒಂದು ಲಕ್ಷ ಶೇರ್ ಆಗಿದೆ. ಸಾವಿರಾರು ಮಂದಿ ಚಿತ್ರ ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ.