alex Certify ಶಾಕಿಂಗ್: ಆಸ್ಪತ್ರೆ ಬೆಡ್ ಖಾಲಿ ಮಾಡಬೇಕೆಂದು ರೋಗಿಗಳನ್ನೇ ಸಾಯಿಸಿದ ವೈದ್ಯ​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಆಸ್ಪತ್ರೆ ಬೆಡ್ ಖಾಲಿ ಮಾಡಬೇಕೆಂದು ರೋಗಿಗಳನ್ನೇ ಸಾಯಿಸಿದ ವೈದ್ಯ​…!

ಹೊಸ ರೋಗಿಗಳಿಗೆ ಬೆಡ್​ ನೀಡಬೇಕೆಂದು ಆಸ್ಪತ್ರೆಯಲ್ಲಿ ಮೊದಲೇ ಅಡ್ಮಿಟ್ ಆಗಿದ್ದ​ ಇಬ್ಬರು ಕೊರೊನಾ ಸೋಂಕಿತ ವೃದ್ಧರನ್ನ ಉದ್ದೇಶ ಪೂರ್ವಕವಾಗಿ ಸಾಯಿಸಿದ ಆರೋಪದ ಹಿನ್ನೆಲೆ ಇಟಲಿಯಲ್ಲಿ ವೈದ್ಯನೊಬ್ಬನನ್ನ ಬಂಧಿಸಲಾಗಿದೆ.

47 ವರ್ಷದ ವೈದ್ಯ ಮಾರ್ಚ್​ ತಿಂಗಳಲ್ಲಿ ಕೊರೊನಾ ವೈರಸ್​ ಮೊದಲ ಅಲೆ ವ್ಯಾಪಕವಾಗಿ ಇದ್ದ ವೇಳೆ 61 ವರ್ಷದ ನಟಾಲ್​ ಬಾಸ್ಸಿ ಹಾಗೂ 80 ವರ್ಷದ ಏಂಜೆಲೋ ಪ್ಯಾಲೆಟ್ಟಿ ಎಂಬವರಿಗೆ ಮಿತಿಮೀರಿದ ಡೋಸ್​ನ ಅರವಳಿಕೆ ನೀಡಿದ್ದರು ಎಂಬ ಆರೋಪ ಎದುರಾಗಿದೆ. ಲೊಂಬಾರ್ಡಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಅರಬ್​ ರಾಷ್ಟ್ರಗಳಿಂದ ವಿಮಾನ ಪ್ರಯಾಣ ನಿಷೇಧಿಸಿದ ಬ್ರಿಟನ್​

ಕಳೆದ ವರ್ಷದ ಮಾರ್ಚ್​ ತಿಂಗಳಲ್ಲಿ ಕೊರೊನಾ ರೋಗಿಗಳನ್ನ ನಿಭಾಯಿಸಲು ಆಸ್ಪತ್ರೆಗಳು ಹೆಣಗಾಡುತ್ತಿದ್ದವು. ಈ ವೇಳೆ ಆಸ್ಪತ್ರೆ ಬೆಡ್​ ಖಾಲಿ ಮಾಡಬೇಕು ಎಂಬ ಉದ್ದೇಶದಿಂದ ಆರೋಪಿ ವೈದ್ಯ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...