alex Certify 60 ವರ್ಷಗಳ ಸುಖ ದಾಂಪತ್ಯ ಕೊರೋನಾ ಕಾರಣಕ್ಕೆ ಹತ್ತೇ ದಿನದಲ್ಲಿ ಅಂತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

60 ವರ್ಷಗಳ ಸುಖ ದಾಂಪತ್ಯ ಕೊರೋನಾ ಕಾರಣಕ್ಕೆ ಹತ್ತೇ ದಿನದಲ್ಲಿ ಅಂತ್ಯ

Couple Married for Almost 60 Years Dies 10 Days Apart After Contracting Coronavirus

ಅಮೆರಿಕದ ಷಿಕಾಗೋದ ಹಿರಿಯ ಜೋಡಿಯ 60 ವರ್ಷಗಳ ದಾಂಪತ್ಯಕ್ಕೆ ಕೋವಿಡ್-19 ಸೋಂಕು ಅಂತ್ಯ ಹಾಡಿದೆ.

ಮೈಕ್ ಬ್ರೂನೋ ಹಾಗೂ ಕರೋಲ್ ಬ್ರೂನೋ ಎಂಬ ಈ ಹಿರಿಯ ಜೋಡಿ ಕೋವಿಡ್-19 ಸೋಂಕಿನ ವಿರುದ್ಧ ಸಕಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದರು. ಆದರೆ ತಮ್ಮ ಮಗ ಹಾಗೂ ಮಗಳು ಕೆಲಸ ಮಾಡುವ ಸಲೂನ್‌ನಲ್ಲಿ ಹೇರ್‌ಕಟ್‌ಗೆಂದು ಕರೋಲ್ ಹೋಗಿದ್ದ ವೇಳೆ ಅವರಿಗೆ ಕೊರೋನಾ ಸೋಂಕು ತಗುಲಿಬಿಟ್ಟಿದೆ.

ಸಲೂನ್‌ನಲ್ಲಿ ಅದೆಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಮಾಸ್ಕ್ ಧರಿಸಿಕೊಂಡರೂ ಸಹ ಕರೋಲ್‌ಗೆ ಸೋಂಕು ಅಂಟಿಬಿಟ್ಟಿದೆ. ಅವರಿಂದ ಅವರ ಪತಿ ಮೈಕ್‌ ಸಹ ಸೋಂಕು ಪೀಡಿತರಾಗಿಬಿಟ್ಟಿದ್ದಾರೆ.

ಇದಾದ ಬಳಿಕ, ದಂಪತಿಗಳಿಬ್ಬರೂ ಸಹ ಕೇವಲ ಹತ್ತು ದಿನಗಳ ಅಂತರದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ತಮ್ಮ ಹೆತ್ತವರ ನಿಧನವು ಎಲ್ಲರಿಗೂ ಎಚ್ಚರಿಕೆಯ ಘಂಟೆಯಾಗಲಿ ಎಂದಿರುವ ದುಃಖತಪ್ತ ಪುತ್ರ ಜೋಸೆಫ್ ಬ್ರೂನೋ, ಯಾರು ಬೇಕಾದರೂ ಈ ವೈರಸ್‌ಗೆ ಬಲಿಯಾಗಬಹುದು ಎಂದು ಎಲ್ಲರೂ ಅರಿತುಕೊಂಡಲ್ಲಿ ಒಳ್ಳೆಯದು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...