alex Certify ಮೈ ಝುಂ ಎನಿಸುತ್ತೆ ಸೇತುವೆ ಮೇಲೆ ಸಂಭವಿಸಿದ ಅಪಘಾತದ ದೃಶ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ಝುಂ ಎನಿಸುತ್ತೆ ಸೇತುವೆ ಮೇಲೆ ಸಂಭವಿಸಿದ ಅಪಘಾತದ ದೃಶ್ಯ…..!

60 ವರ್ಷ ಆಸುಪಾಸಿನ ದಂಪತಿ ಅಮೆರಿಕದ ಇಡಾಹೋದಲ್ಲಿ ರಸ್ತೆ ಅಪಘಾತದ ಬಳಿಕ 100 ಅಡಿ ಎತ್ತರದ ಸೇತುವೆ​ ಒಂದರಲ್ಲಿ ಕಾರು ಸಮೇತ ನೇತಾಡಿದ ಮೈ ಝುಂ ಎನ್ನಿಸುವ ಘಟನೆ ನಡೆದಿದೆ.

ಸೇತುವೆಯಲ್ಲಿ ನೇತಾಡುತ್ತಿದ್ದ ವೃದ್ಧ ದಂಪತಿಯನ್ನ ಸಿನಿಮೀಯ ರೀತಿಯಲ್ಲಿ ರಕ್ಷಣಾ ಸಿಬ್ಬಂದಿ ಬಚಾವ್​ ಮಾಡಿದ್ದಾರೆ. ವೃದ್ಧ ದಂಪತಿಯ ರಕ್ಷಣಾ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಮಾರ್ಚ್ 16ರಂದು ವೃದ್ಧ ದಂಪತಿ ತಮ್ಮ ವ್ಯಾನ್​ನಲ್ಲಿ ಮಲಾಡ್​ ಜಾರ್ಜ್​ ಸೇತುವೆ ಮೇಲೆ ಪ್ರಯಾಣ ಮಾಡುತ್ತಿದ್ದರು. ಇದೇ ವೇಳೆ 67 ವರ್ಷದ ವೃದ್ಧ ವಾಹನದ ಮೇಲಿನ ನಿಯಂತ್ರಣ ತಪ್ಪಿದ ಕಾರಣ ವ್ಯಾನ್​ ಅಪಘಾತಕ್ಕೆ ಈಡಾಗಿದ್ದು ಪರಿಣಾಮ ದಂಪತಿ ಸೇತುವೆಯಲ್ಲಿ ನೇತಾಡುವಂತಾಗಿದೆ.

ಸೇತುವೆಯ ಬದಿಯಲ್ಲಿ ನೇತಾಡುತ್ತಿದ್ದ ವಾಹನದ ಒಳಗೆ ನೇತಾಡುತ್ತಿದ್ದ ದಂಪತಿಯನ್ನ ರಕ್ಷಣಾ ಸಿಬ್ಬಂದಿ ಟ್ರಕ್​​​ನ ಸಹಾಯದಿಂದ ರಕ್ಷಿಸಿದ್ದಾರೆ.

Below is the press release from our friends and partners at the Idaho State Police. This afternoon our SORT – Special…

Posted by Magic Valley Paramedics on Monday, March 15, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...