alex Certify ವಧು-ವರರಿಗೆ ಚಡ್ಡಿಯಲ್ಲೇ ಶುಭ ಹಾರೈಸಿದ ಸಂಬಂಧಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧು-ವರರಿಗೆ ಚಡ್ಡಿಯಲ್ಲೇ ಶುಭ ಹಾರೈಸಿದ ಸಂಬಂಧಿಕರು

ನ್ಯೂಯಾರ್ಕ್‌: ಈ ಮದುವೆಯಲ್ಲಿ ನೂರಾರು ಜನ ಭಾಗವಹಿಸಿ ವಧು, ವರರಿಗೆ ಶುಭ ಹಾರೈಸಿದರು. ಆದರೆ, ಎಲ್ಲರೂ ಒಟ್ಟಿಗಿರಲಿಲ್ಲ!
ಅದ್ಹೇಗೆ ಸಾಧ್ಯ ಎನ್ನುತ್ತೀರಾ…?ಮಾಹಿತಿ ತಂತ್ರಜ್ಞಾನ ಈಗ ಅಸಾಧ್ಯವನ್ನೂ ಸಾಧ್ಯವನ್ನಾಗಿಸಿದೆ.

ನ್ಯೂಯಾರ್ಕ್‌ ನಗರದ ಮಾರ್ಕ್ ವ್ಯಾನ್ ಹಾಗೂ ಜೆನ್ ಒ-ಲೇರಿ ಅವರು ತಮ್ಮ ಮನೆಯಲ್ಲೇ ಕಳೆದ
ಶನಿವಾರ ಸರಳವಾಗಿ ವಿವಾಹವಾದರು. ಸಂಬಂಧಿಕರು, ಸ್ನೇಹಿತರು ಝೂಮ್ ಆ್ಯಪ್ ಮೂಲಕ ಶುಭ ಹಾರೈಸಿದರು.

ಈ ಜೋಡಿ ತಿಂಗಳ ಹಿಂದೆ ಅದ್ದೂರಿ ರಿಸೆಪ್ಶನ್‌ ನೊಂದಿಗೆ ಚರ್ಚ್ ನಲ್ಲಿ ವಿವಾಹವಾಗಲಿಚ್ಛಿಸಿತ್ತು. ಆದರೆ, ಕರೊನಾ ಕಾರಣದಿಂದ ಅಮೇರಿಕಾ ಸಂಪೂರ್ಣ ಲಾಕ್ಡೌನ್ ಆಗಿತ್ತು. ಇದರಿಂದ ಗವರ್ನರ್ ಅಂದ್ರೇವ್ ಕೌಮೋ ಅವರು ಜನ ಸೇರಿಸದೆ, ಮನೆಯಲ್ಲೇ ವಿವಾಹವಾಗಲು ಮಾತ್ರ ಅನುಮತಿ ನೀಡಿದ್ದರು. ಆ ಭಾಗದ ಕೌನ್ಸಿಲ್ ಸದಸ್ಯ ಜಿಮ್ಮಿ ವ್ಯಾಮ್ ಬ್ರಾಮರ್ ತಮ್ಮ ಮನೆಯ ಹಿಂದಿನ ಖಾಲಿ ಜಾಗದಲ್ಲಿ ಸರಳ ವಿವಾಹಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ವರ ಮಾರ್ಕ್ ತಂತ್ರಜ್ಞಾನ ನಿರ್ವಹಣಾ ವಿಭಾಗದಲ್ಲಿ ಕೆಲಸ ಮಾಡಿದ್ದರಿಂದ ತಂತ್ರಜ್ಞಾನವನ್ನು ವಿವಾಹ‌ ಸಂದರ್ಭದಲ್ಲಿ ಬಳಸಿಕೊಳ್ಳಲು ಇಚ್ಛಿಸಿದ್ದರು. ಜೋಡಿ ಮನೆಯ ಸ್ಟ್ಯಾಂಡ್ ಒಂದರ ಮೇಲೆ ಲ್ಯಾಪ್ಟಾಪ್ ಇಟ್ಟು, ಝೂಮ್ ಆಪ್ ತೆರೆದು ಲೈವ್ ನಲ್ಲಿ ತಮ್ಮ ವಿವಾಹ ಕಾರ್ಯ ನೆರವೇರಿಸಿಕೊಂಡರು. ಇಬ್ಬರೂ ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ತೊಟ್ಟಿದ್ದರು.

100 ರಷ್ಟು ಸಂಬಂಧಿಕರು, ಸ್ನೇಹಿತರು ವಿಡಿಯೋ ಕಾಲ್ ನಲ್ಲಿ ಸೇರಿಕೊಂಡು ಶುಭ ಹಾರೈಸಿದರು. ನವ ದಂಪತಿ ಕೇಕ್ ಕಟ್ ಮಾಡಿದರು. ನಂತರ ಗ್ರೀಕ್ ಭೋಜನ ಕೂಡ ಇತ್ತು.‌ ಈ ಸಂದರ್ಭದಲ್ಲಿ ಮೊದಲೇ ಸೂಚಿಸಿದಂತೆ ವಿಡಿಯೋ ಕಾಲ್ ನಲ್ಲಿ ಬಂದ ಎಲ್ಲರೂ ವಿವಾಹದ ಪೋಷಾಕು ಕೋಟ್ ಧರಿಸಿದ್ದರು. ಆದರೆ, ಕೋಟ್ ಜತೆ ಪ್ಯಾಂಟ್ ಧರಿಸುವುದು ಕಡ್ಡಾಯವಾಗಿರದ ಕಾರಣ ಹಲವರು ಚಡ್ಡಿ ಧರಿಸಿದ್ದು, ವಿಶೇಷವಾಗಿತ್ತು. ಮದುವೆಯ ಫೋಟೋಗಳನ್ನು ಕೌನ್ಸಿಲರ್ ಜಿಮ್ಮಿ ವ್ಯಾನ್ ಬ್ರಾಮರ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಾ‌ನು 10 ಅಡಿ ದೂರದಿಂದಲೇ‌ ಎಲ್ಲ ವ್ಯವಸ್ಥೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...