alex Certify ದಂಪತಿ ಎಡವಟ್ಟಿನಿಂದ ಹಾಳಾಯ್ತು ಕೋಟ್ಯಾಂತರ​ ಮೌಲ್ಯದ ಕಲಾಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಪತಿ ಎಡವಟ್ಟಿನಿಂದ ಹಾಳಾಯ್ತು ಕೋಟ್ಯಾಂತರ​ ಮೌಲ್ಯದ ಕಲಾಕೃತಿ

ದಕ್ಷಿಣ ಕೊರಿಯಾದ ದಂಪತಿ ಬರೋಬ್ಬರಿ 3.6 ಕೋಟಿ ರೂಪಾಯಿ ಮೌಲ್ಯದ ಕಲಾಕೃತಿಯ ಮೇಲೆ ಅಕಸ್ಮಾತ್​​ ಆಗಿ ಬಣ್ಣವನ್ನ ಬಳಿಯುವ ಮೂಲಕ ಬೆಲೆ ಬಾಳುವ ಚಿತ್ರವನ್ನ ಹಾಳು ಮಾಡಿದ್ದಾರೆ.

ಲೊಟ್ಟೆ ವರ್ಲ್ಡ್ ಮಾಲ್​​ನಲ್ಲಿರುವ ಆರ್ಟ್​ ಗ್ಯಾಲರಿಯ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಈ ದಂಪತಿ ಅಮೆರಿಕದ ಮಿಲಿಯನ್​ ಡಾಲರ್​ ಮೌಲ್ಯದ ಕಲಾಕೃತಿಯ ಮೇಲೆ ಮನಬಂದಂತೆ ಬಣ್ಣವನ್ನ ಚಿಮ್ಮಿಸಿದ್ದಾರೆ. ಈ ಕಲಾಕೃತಿಯನ್ನ ಕಲಾವಿದ ಜೋನ್​ವನ್​ ಎಂಬವರು 2016ರಲ್ಲಿ ಪ್ರೇಕ್ಷಕರ ಮುಂದೆಯೇ ರಚಿಸಿದ್ದರು. ಇದು 240x 700 ಸೆಂಟಿ ಮೀಟರ್​ ಅಳತೆ ಹೊಂದಿದೆ.

ವಿಧಾನಸಭಾ ಚುನಾವಣೆಗೂ ಮುನ್ನ ಬರೋಬ್ಬರಿ 428 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ವಶಕ್ಕೆ..!

ಈ ಕಲಾಕೃತಿಯನ್ನ ಹಾಗೂ ಕಲಾಕೃತಿಗೆ ರಚಿಸಲು ಬಳಸಲಾಗಿದ್ದ ಬಣ್ಣ ಹಾಗೂ ಬ್ರಶ್​ಗಳನ್ನ ಕಲಾಕೃತಿ ಪ್ರದರ್ಶನ ಕಾರ್ಯಕ್ರಮಗಳಿಗೆ ವರ್ಗಾಯಿಸಲಾಗುತ್ತಿತ್ತು. ಹೀಗಾಗಿ ಈ ಆರ್ಟ್​ ಗ್ಯಾಲರಿಯಲ್ಲಿಯೂ ಬಣ್ಣ ಹಾಗೂ ಬ್ರಶ್​ ಎದುರಿಗೇ ಇರೋದನ್ನ ಕಂಡ ದಂಪತಿ ಇದಕ್ಕೆ ತಮ್ಮದೇ ಒಂದು ರೂಪ ಕೊಡೋಣ ಅಂತಾ ಬಣ್ಣಗಳನ್ನ ಚಿಮ್ಮಿಸಿದ್ದಾರೆ ಎನ್ನಲಾಗಿದೆ.

ಈ ಘಟನೆ ಬಳಿಕ ದಂಪತಿಯನ್ನ ಬಂಧಿಸಲಾಯಿತಾದರೂ ಗೊತ್ತಿಲ್ಲದೇ ಮಾಡಿದ ತಪ್ಪಾಗಿದ್ದರಿಂದ ಬಿಡುಗಡೆ ಮಾಡಲಾಗಿದೆ. ಇದೀಗ ಇಂತಹದ್ದೇ ಮತ್ತೊಂದು ಕಲಾಕೃತಿಯನ್ನ ರಚಿಸಿಕೊಡೋಕೆ ಸಾಧ್ಯವಾ ಅಂತಾ ಕಲಾವಿದನೊಂದಿಗೆ ಚರ್ಚೆ ಮಾಡಲಾಗುತ್ತಿದೆ ಎಂದು ಕಲಾಕೃತಿ ಪ್ರದರ್ಶನದ ಮುಖ್ಯಸ್ಥ ವೂಕ್​ ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲೂ ಬ್ರಿಟನ್​ನಲ್ಲಿ ದಂಪತಿ ವ್ಯಾಲೆಂಟೈನ್ಸ್​ ಡೇ ಕಲಾಕೃತಿಯನ್ನ ಹಾಳುಗೆಡವಿತ್ತು. ಈ ಕಲಾಕೃತಿಯನ್ನ ರಚಿಸಿದ ಕೇವಲ 48 ಗಂಟೆಗಳಲ್ಲಿ ಅದನ್ನ ಹಾಳು ಮಾಡಲಾಗಿತ್ತು.

— CBS News (@CBSNews) April 2, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...