alex Certify ಬೆರಗಾಗಿಸುತ್ತೆ ಸಾವು ಗೆದ್ದು ಬಂದ ವ್ಯಕ್ತಿಯ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಸಾವು ಗೆದ್ದು ಬಂದ ವ್ಯಕ್ತಿಯ ಕಥೆ

ಇಲ್ಲೊಬ್ಬ ಕೊರೋನಾ ಬೀಟರ್ ಈಗ ಜಾಗತಿಕ ಸುದ್ದಿಯಾಗಿದ್ದಾನೆ. ಕೊರೋನ ತಗುಲಿಸಿಕೊಂಡ 44 ವರ್ಷದ ಎರಡು ಮಕ್ಕಳ ತಂದೆ ಬರೋಬ್ಬರಿ 50 ದಿನಗಳ ಕಾಲ ವೆಂಟಿಲೇಟರ್ ನಲ್ಲಿ ದಿನ ಕಳೆದು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಉಸಿರಾಟದ ತೊಂದರೆಯ ಹಿನ್ನೆಲೆ ಸ್ಟೀವ್ ಬ್ಯಾಂಕ್ ಎಂಬುವರು ಮಾರ್ಚ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವೇ ಗಂಟೆಗಳಲ್ಲಿ ಅವರು ಕೋಮಾಗೂ ಹೋಗಿದ್ದರು. ಕೆಲ ದಿನಗಳ ನಂತರ ನ್ಯುಮೋನಿಯಾ ಜತೆ ಹೃದಯ, ಮೂತ್ರಪಿಂಡ ಮತ್ತು ಉಸಿರಾಟದ ವೈಫಲ್ಯ ಆರಂಭವಾಗಿ ಪರಿಸ್ಥಿತಿ ಹದಗೆಟ್ಟಿತ್ತು.

ಹೀಗಾಗಿ ಈತ ಬದುಕುವ ಸಾಧ್ಯತೆ ಶೇ.1ರಷ್ಟು ಮಾತ್ರ ಎಂದು ಕುಟುಂಬಕ್ಕೂ ವೈದ್ಯರು ತಿಳಿಸಿದ್ದರು. ಬೇಸರ ಹೊಂದಿದ ಕುಟುಂಬದ ಸದಸ್ಯರು ಅಲ್ಲಿನ ಸಂಪ್ರದಾಯದಂತೆ ವಿದಾಯ ಪತ್ರವನ್ನೂ ಬರೆಯಲು ಪ್ರಾರಂಭಿಸಿದರು.

ಅಚ್ಚರಿಯೆಂದರೆ ಆತ ಆಸ್ಪತ್ರೆಗೆ ಸೇರಿದ ಐವತ್ತು ದಿನಗಳ ನಂತರ ದೇಹಾರೋಗ್ಯ ನಿಧಾನವಾಗಿ ಸುಧಾರಿಸಿತು. ಮೇ 21ರಂದು ಆಸ್ಪತ್ರೆಯಿಂದಲೇ ಬಿಡುಗಡೆ ಮಾಡಲಾಯಿತು.

ತಮ್ಮ ಆಸ್ಪತ್ರೆ ಘಟನೆಯನ್ನು ವಿವರಿಸಿರುವ ಸ್ಟೀವ್, ಲಾಕ್ಡೌನ್ ಗೆ ಮೊದಲು ನಾನು ಆಸ್ಪತ್ರೆಗೆ ಹೋಗಿದ್ದೆ ಆಗ ಕೇವಲ 55 ಜನರು ಮೃತಪಟ್ಟಿದ್ದರು, ನಾನು ಕೋಮಾದಿಂದ ಹೊರ ಬಂದಾಗ 31 ಸಾವಿರಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದಾರೆ, ಪರಿಸ್ಥಿತಿ ಬದಲಾಗಿದೆ. ಬಹಳ ಆಘಾತವಾಗಿದೆ ಎಂದಿದ್ದಾರೆ.

ತಾನು ಕೋಮಾದಿಂದ ಹೊರಬಂದಾಗ ನನ್ನ ಸುತ್ತಲೂ ನರ್ಸ್ ಗಳು ನಿಂತು ಚಪ್ಪಾಳೆ ಹೊಡೆದಿದ್ದು ಹಾಗೂ ಈಗ ಪರಿಪೂರ್ಣವಾಗಿ ನಡೆಯಲಾರದ ಸ್ಥಿತಿ ಹೀಗೆ ವಿವಿಧ ವಿಚಾರಗಳನ್ನು ಸ್ಟೀವ್ ಹಂಚಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...