alex Certify ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸಲು ಬಂದ ಚಾಕಲೇಟ್‌ಧಾರಿ ಸಾಂಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸಲು ಬಂದ ಚಾಕಲೇಟ್‌ಧಾರಿ ಸಾಂಟಾ

ಕೋವಿಡ್‌-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಯತ್ನವೊಂದಕ್ಕೆ ಕೈ ಹಾಕಿರುವ ಹಂಗೇರಿಯ ಸಿಹಿ ತಿನಿಸುಗಳ ತಯಾರಕರೊಬ್ಬರು ಚಾಕಲೇಟ್‌ಗಳ ವಿಶಿಷ್ಟ ಕಲಾಕೃತಿಗಳನ್ನು ರಚಿಸಿದ್ದಾರೆ.

ಲಾಸ್ಲೋ ರಿಮ್‌ಕೋಜಿ ಹೆಸರಿನ ಈತ ಚಾಕಲೇಟ್‌ನಲ್ಲಿ ಮಾಸ್ಕ್‌ಧಾರಿ ಸಾಂಟಾ ಕಲಾಕೃತಿಗಳನ್ನು ಸೃಷ್ಟಿಸಿದ್ದಾರೆ. ಈ ಚಾಕಲೇಟ್‌ಗಳು ಸಿಹಿ ಪ್ರಿಯರಿಗೆ ಸಖತ್‌ ಇಷ್ಟವಾಗತೊಡಗಿವೆ. ಆನ್ಲೈನ್‌ನಲ್ಲಿ ಸಿಕ್ಕಾಪಟ್ಟೆ ಆರ್ಡರ್‌ಗಳು ಬರುತ್ತಿರುವ ಕಾರಣದಿಂದ ಈ ಚಾಕಲೇಟ್‌ಗಳನ್ನು ಪೂರೈಸಲು ಲಾಸ್ಲೋ ಪರದಾಡುತ್ತಿದ್ದಾರೆ.

“ಖುದ್ದು ಸಾಂಟಾನೇ ಭೂಮಿಗೆ ಬಂದರೂ ಸಹ ಈಗಿನ ಪರಿಸ್ಥಿತಿಯಲ್ಲಿ ಮಾಸ್ಕ್ ಹಾಕಿಕೊಳ್ಳಲೇಬೇಕು ಎಂದು ನನಗೆ ಅನಿಸುತ್ತದೆ. ಏಕೆಂದರೆ ಸಾಂಟಾ ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಉದಾಹರಣೆ ತೋರಬೇಕಾಗುತ್ತದೆ” ಎನ್ನುತ್ತಾರೆ ಲಾಸ್ಲೋ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...