alex Certify ಸೋಂಕು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ವೈದ್ಯರ ಗೌರವಾರ್ಥ ಬಂತು ’ಶಾ ಬಾರ್‌’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ವೈದ್ಯರ ಗೌರವಾರ್ಥ ಬಂತು ’ಶಾ ಬಾರ್‌’

ಕೊರೋನಾ ವೈರಸ್ ಕಾಲಘಟ್ಟದಲ್ಲಿ ಅಮೆರಿಕ maine ರಾಜ್ಯವನ್ನು ಸೋಂಕು ಮುಕ್ತವಾಗಿ ಇಡಲು ಯತ್ನಿಸುತ್ತಿರುವ ಡಾಕ್ಟರ್‌ ನೀರವ್ ಶಾ ಗೌರವಾರ್ಥ ಅಲ್ಲಿನ ಚಾಕಲೇಟ್ ಕಂಪನಿಯೊಂದು, ’ಶಾ ಬಾರ್‌’ ಹೆಸರಿನಲ್ಲಿ ಹೊಸ ಚಾಕಲೇಟ್‌ಗಳನ್ನು ಹೊರತಂದಿದೆ. Wilbur’s of Maine Chocolate Confections ಕಂಪನಿ ಈ ಚಾಕಲೇಟ್‌ಗಳನ್ನು ಹೊರತಂದಿದೆ.

maine ರಾಜ್ಯದ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕರಾದ ಡಾ. ಶಾ, ಪ್ರತಿನಿತ್ಯ ತಮ್ಮ ರಾಜ್ಯದ ವೈದ್ಯಕೀಯ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಮೂಲಕ ಸೋಂಕನ್ನು ನಿಯಂತ್ರಣದಲ್ಲಿಟ್ಟಿದ್ದು, ಇಂಥ ಸಂದರ್ಭದಲ್ಲೂ ಸಹ ಸಮಚಿತ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಇದೀಗ ಅವರ ಫೋಟೋ ಇರುವ ಚಾಕಲೇಟ್ ಬಾರ್‌ ಒಂದಕ್ಕೆ $2.25 ಬೆಲೆ ಇದ್ದು, ಆರು ಬಾರ್‌ಗಳ ಪ್ಯಾಕ್‌ ‌ಅನ್ನು $13.5ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಬಾರ್‌ಗಳ ರಾಪರ್‌ಗಳ ಮೇಲೆ ಡಾ. ಶಾ ಅವರ ಫೋಟೋಗಳನ್ನು ಮುದ್ರಿಸಲಾಗಿದೆ.

Our new chocolate bars combine our appreciation and respect for Dr. Shah, Maine’s CDC Director, with our premium milk…

Posted by Wilbur's of Maine Chocolate Confections on Monday, June 22, 2020

Excited to have dropped off our first donation check this week! We have been so amazed about the love we have seen for…

Posted by Wilbur's of Maine Chocolate Confections on Friday, July 17, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...