alex Certify ಮದುವೆಗೆ ಕೆಲ ನಿಮಿಷದ ಹಿಂದೆ ವರನಿಗೆ ಗೊತ್ತಾಯ್ತು ಈ ವಿಷ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಕೆಲ ನಿಮಿಷದ ಹಿಂದೆ ವರನಿಗೆ ಗೊತ್ತಾಯ್ತು ಈ ವಿಷ್ಯ…..!

ಚೀನಾದಲ್ಲಿ ಮದುವೆ ಸಂದರ್ಭದಲ್ಲಿ ನಡೆದ ಘಟನೆಯೊಂದು ಈಗ ಸುದ್ದಿಯಲ್ಲಿದೆ. ಮದುವೆಗೆ ಕೆಲ ನಿಮಿಷದ ಮೊದಲು ವಧು ತನ್ನ ಸಹೋದರಿ ಎಂಬ ಸಂಗತಿ ವರನಿಗೆ ಗೊತ್ತಾಗಿದೆ. ವಧುವನ್ನು ಹಿಡಿದುಕೊಂಡ ವರನ ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಘಟನೆ ಜಿಯಾಂಗ್ಸು ಪ್ರದೇಶದಲ್ಲಿ ನಡೆದಿದೆ.

20 ವರ್ಷಗಳ ಹಿಂದೆ ಕಳೆದು ಹೋಗಿದ್ದ ಮಗಳನ್ನು ತಾಯಿ ಪತ್ತೆ ಹಚ್ಚಿದ್ದಾಳೆ. ಈ ಬಗ್ಗೆ ವಧುವಿನ ಪಾಲಕರಿಗೆ ಕೇಳಿದಾಗ, ವಧು 20 ವರ್ಷಗಳ ಹಿಂದೆ ರಸ್ತೆಯಲ್ಲಿ ಸಿಕ್ಕಿದ್ದಳು ಎಂದಿದ್ದಾರೆ. ಆದ್ರೆ ಮದುವೆಗೆ ಈ ಸಂಗತಿ ಯಾವುದೇ ಅಡ್ಡಿಯಾಗಿಲ್ಲ. ವಧುವಿನ ಹೆತ್ತ ತಾಯಿ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾಳೆ. ನಂತ್ರ ಮದುವೆ ನಡೆದಿದೆ.

ವಧುವಿನ ತಾಯಿ ಮದುವೆಗೆ ಒಪ್ಪಿಗೆ ನೀಡಲು ಮುಖ್ಯ ಕಾರಣವಿದೆ. ವರ ಆಕೆಯ ಸ್ವಂತ ಮಗನಲ್ಲ. ವಾಸ್ತವವಾಗಿ 20 ವರ್ಷದ ಹಿಂದೆ ಮಗಳನ್ನು ಕಳೆದುಕೊಂಡ ತಾಯಿ, ಗಂಡು ಮಗುವನ್ನು ದತ್ತು ಪಡೆದಿದ್ದಳಂತೆ. ಹಾಗಾಗಿ ಇಬ್ಬರ ಮದುವೆಗೆ ತಾಯಿ ಒಪ್ಪಿಗೆ ನೀಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...