alex Certify ಮೀನು ಹಿಡಿಯುತ್ತಿದ್ದವನ ಬೆನ್ನಟ್ಟಿ ಬಂತು ಮೊಸಳೆ….! ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಹಿಡಿಯುತ್ತಿದ್ದವನ ಬೆನ್ನಟ್ಟಿ ಬಂತು ಮೊಸಳೆ….! ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಮೊಸಳೆಗಳ ಹೆಸರು ಕೇಳಿದ್ರೇನೆ ಸಾಕು ಮೈ ಝುಂ ಅನ್ನುತ್ತೆ. ಅಂತದ್ರಲ್ಲಿ ಇವುಗಳು ಕಣ್ಣೆದುರೇ ಪ್ರತ್ಯಕ್ಷವಾದರಂತೂ ಕತೆ ಮುಗೀತು ಅಂತಾನೇ ಲೆಕ್ಕ. ಆದರೆ ಫ್ಲೋರಿಡಾದಲ್ಲಿ ನದಿಯೊಂದರಲ್ಲಿ ಮೀನಿಗೆ ಗಾಳ ಹಾಕಿದ್ದ ವ್ಯಕ್ತಿಯೊಬ್ಬನ ಎದುರು ಇದಕ್ಕಿದ್ದಂತೆಯೇ ಮೊಸಳೆ ಪ್ರತ್ಯಕ್ಷವಾಗಿದ್ದು ಆತ ಜೀವ ಉಳಿಸಿಕೊಳ್ಳಲು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಎದೆ ಝಲ್​ ಎನ್ನಿಸುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಟೊಮಿ ಲಿ ಎಂಬ ಹೆಸರಿನ ವ್ಯಕ್ತಿ ಮೇ 8ರಂದು ನದಿಯೊಂದರಲ್ಲಿ ಮೀನಿಗೆ ಗಾಳ ಹಾಕಿದ್ದರು. ಈ ವೇಳೆ ಅವರು ನದಿಯಲ್ಲಿ ಮೊಸಳೆಯ ತಲೆ ಕಾಣ್ತಿರೋದನ್ನ ಗಮನಿಸಿದ್ದಾರೆ. ಕೂಡಲೇ ದೇವರ ಹೆಸರನ್ನ ನೆನೆದ ಟೊಮಿ ಅಲ್ಲಿಂದ ಕಾಲ್ಕೀಳಲು ಯತ್ನಿಸಿದ್ದಾರೆ. ಒಮ್ಮೆಲೆ ನದಿಯಿಂದ ಎದ್ದು ಬಂದ ಮೊಸಳೆ ಸ್ವಲ್ಪ ದೂರದವರೆಗೆ ಟೊಮಿಯನ್ನ ಬೆನ್ನಟ್ಟಿದೆ.

ಈ ವಿಡಿಯೋ ಟ್ವಿಟರ್, ಫೇಸ್​ಬುಕ್​, ಯುಟ್ಯೂಬ್​ ಸೇರಿದಂತೆ ಸಾಮಾಜಿಕ ಜಾಲತಾಣದ ಎಲ್ಲಾ ವೇದಿಕೆಗಳಲ್ಲಿ ವೈರಲ್​ ಆಗಿದ್ದು ಲಕ್ಷಕ್ಕೂ ಹೆಚ್ಚು ವೀವ್ಸ್ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...