alex Certify ಭಾರಿ ಭದ್ರತೆಯ ಕಾರಾಗೃಹದಿಂದ ತಪ್ಪಿಸಿಕೊಂಡ ಬೆಕ್ಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಭದ್ರತೆಯ ಕಾರಾಗೃಹದಿಂದ ತಪ್ಪಿಸಿಕೊಂಡ ಬೆಕ್ಕು

ಮಾದಕ ದ್ರವ್ಯಗಳ ಕಳ್ಳಸಾಗಾಟದಲ್ಲಿ ಬಂಧಿಸಲಾಗಿದ್ದ ಬೆಕ್ಕೊಂದು ಜೈಲಿನಿಂದ ತಪ್ಪಿಸಿಕೊಂಡು ಓಡಿಬಿಟ್ಟಿದೆ. ಡ್ರಗ್ಸ್ ಹಾಗೂ ಸಿಮ್ ಕಾರ್ಡ್‌ಗಳ ಕಳ್ಳಸಾಗಾಟದ ಸಿಂಡಿಕೇಟ್‌ ಜೊತೆಗೆ ಕೆಲಸ ಮಾಡಿದ ಆಪಾದನೆ ಬೆಕ್ಕಿನ ಮೇಲೆ ಇದೆ.

ಶ್ರೀಲಂಕಾದ ವೆಲಿಕಡಾ ಜೈಲಿನಲ್ಲಿ ಈ ಬೆಕ್ಕನ್ನು ಇರಿಸಲಾಗಿತ್ತು. ಬೆಕ್ಕಿನ ಕತ್ತಿಗೆ ನೇತು ಹಾಕಲಾಗಿದ್ದ ಪುಟ್ಟದೊಂದು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ 2 ಗ್ರಾಂ ಹೆರಾಯಿನ್, ಮೆಮೋರಿ ಚಿಪ್ ಹಾಗೂ ಎರಡು ಸಿಮ್ ಕಾರ್ಡ್‌ಗಳು ಸಿಕ್ಕಿವೆ.

ಶ್ರೀಲಂಕಾದಲ್ಲಿ ಡ್ರಗ್ಸ್‌ ಸಮಸ್ಯೆ ಬಹಳ ದೊಡ್ಡದಿದ್ದು, ಮಾದಕ ದ್ರವ್ಯಗಳ ಕಳ್ಳಸಾಗಾಟಗಾರ ಬಂಧನದ ಪ್ರಕರಣಗಳು ದಿನೇ ದಿನೇ ಹೆಚ್ಚತ್ತಲೇ ಇವೆ. ಈ ಬೆಕ್ಕಿನ ಘಟನೆಗೂ ಮುನ್ನ ಪೊಲೀಸರು, ಹದ್ದೊಂದನ್ನು ಇದೇ ಆರೋಪದ ಮೇಲೆ ಬಂಧಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...