alex Certify ಅಮೆರಿಕಾದ ʼಹ್ಯಾಂಡ್​ ಸ್ಯಾನಿಟೈಸರ್ʼ ಕುರಿತ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದ ʼಹ್ಯಾಂಡ್​ ಸ್ಯಾನಿಟೈಸರ್ʼ ಕುರಿತ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಕೊರೊನಾ ವೈರಸ್​ ಸೋಂಕಿನಿಂದ ಬಚಾವಾಗಲು ಕಳೆದ ವರ್ಷ ಅಮೆರಿಕದ ಗ್ರಾಹಕರು ಬಳಸಿದ ಕೆಲ ಹ್ಯಾಂಡ್​ ಸ್ಯಾನಿಟೈಸರ್​ಗಳಲ್ಲಿ ಕ್ಯಾನ್ಸರ್​ಗೆ ಕಾರಣವಾಗಬಲ್ಲ ರಾಸಾಯನಿಕಗಳನ್ನ ಬಳಕೆ ಮಾಡಲಾಗಿತ್ತು ಎಂದು ಪರೀಕ್ಷಾ ಸಂಸ್ಥೆಯೊಂದು ಹೇಳಿದೆ.

ನ್ಯೂ ಹೆವೆನ್​ನ ವಾಲೈಸರ್​ ಪರೀಕ್ಷಾ ಕೇಂದ್ರ​ ನೀಡಿರುವ ಮಾಹಿತಿ ಪ್ರಕಾರ ಈ ಹ್ಯಾಂಡ್​ ಸ್ಯಾನಿಟೈಸರ್​ಗಳಲ್ಲಿ ಬೆಂಜಿನ್​ ಅಂಶ ಅತ್ಯಧಿಕವಾಗಿತ್ತು ಎಂದು ಹೇಳಿದೆ. ಅಮೆರಿಕದ ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆ ನೀಡಿದ ವರದಿಯ ಪ್ರಕಾರ ಬೆಂಜಿನ್​ನ ಅತಿಯಾದ ಬಳಕೆಯಿಂದ ಕ್ಯಾನ್ಸರ್​ ಬರುತ್ತದೆ.

168 ಸ್ಯಾನಿಟೈಸರ್​ ಬ್ರ್ಯಾಂಡ್​ಗಳ 260 ಬಾಟಲಿಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 17 ಪ್ರತಿಶತ ಮಾದರಿಗಳು ಹೆಚ್ಚಿನ ಮಟ್ಟದ ಬೆಂಜಿನ್​ ಅಂಶ ಹೊಂದಿವೆ. ಪ್ರತಿ ಮಿಲಿಯನ್​ಗೆ ಎರಡು ಭಾಗಕ್ಕೂ ಹೆಚ್ಚಿನ ಬೆಂಜಿನ್​ ಮಿತಿಯನ್ನ ಒಳಗೊಂಡಿರೋದು ಹ್ಯಾಂಡ್​ ಸ್ಯಾನಿಟೈಸರ್​ಗಳಿಗೆ ಎಫ್​ಡಿಎ ವಿಧಿಸಿದ ತಾತ್ಕಾಲಿಕ ಮಿತಿಯಾಗಿತ್ತು.

ಆದರೆ ಹ್ಯಾಂಡ್​ ಸ್ಯಾನಿಟೈಸರ್​ಗಳನ್ನ ಪರೀಕ್ಷೆ ಮಾಡಿದ ಬಳಿಕ ಇದು ತಾತ್ಕಾಲಿಕ ಮಿತಿಗಿಂತ 8 ಪಟ್ಟು ಹೆಚ್ಚಿದೆ ಎಂದು ತಿಳಿದು ಬಂದಿದೆ. ಬೆಂಜಿನ್​ನ ಅತಿಯಾದ ಬಳಕೆಯು ಲ್ಯುಕೆಮಿಯಾದಂತಹ ಭಯಾನಕ ಕಾಯಿಲೆಗೆ ಕಾರಣವಾಗಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...