alex Certify ನೆಟ್ಟಿಗರನ್ನು ಮಂತ್ರಮುಗ್ದರನ್ನಾಗಿಸಿದೆ ಪಾಂಡಾಗಳ ಆಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರನ್ನು ಮಂತ್ರಮುಗ್ದರನ್ನಾಗಿಸಿದೆ ಪಾಂಡಾಗಳ ಆಟ

ಬರ್ಲಿನ್: ತಾಯಿ-ಮಕ್ಕಳ ಬಂಧ ಎಲ್ಲಕ್ಕಿಂತ ಮಿಗಿಲು. ತಾಯಿ, ಮಕ್ಕಳ ಒಳ್ಳೆಯ ಸ್ನೇಹಿತೆಯಾಗಬಲ್ಲಳು. ಒಳ್ಳೆಯ ಶಿಕ್ಷಕಿಯಾಗಬಲ್ಲಳು….ಒಟ್ಟಿನಲ್ಲಿ ಆಕೆ ತೋರುವ ಪ್ರೀತಿ ಮತ್ತು ಇಬ್ಬರ ನಡುವಿನ ಬಾಂಧವ್ಯವನ್ನು ಮತ್ಯಾವ ಸಂಬಂಧದಲ್ಲೂ ಪಡೆಯಲು ಸಾಧ್ಯವಿಲ್ಲ. ಮಾನವರಂತೆ ಪ್ರಾಣಿಗಳೂ ತಮ್ಮ ಮಕ್ಕಳನ್ನು ಹಾಗೂ ಮರಿಗಳು ಅಮ್ಮನನ್ನು ತುಂಬಾ ಹಚ್ಚಿಕೊಳ್ಳುತ್ತವೆ, ಪ್ರೀತಿಸುತ್ತವೆ, ಮುದ್ದಿಸುತ್ತವೆ, ಆಟವಾಡುತ್ತವೆ, ಅವಲಂಬಿಸುತ್ತವೆ ಮತ್ತು ಕಲಿಯುತ್ತವೆ.

ಇಲ್ಲಿ ಅಂಥ ಒಂದು ವಿಡಿಯೋ ವೈರಲ್ ಆಗಿದೆ. ಬರ್ಲಿನ್ ಪ್ರಾಣಿ ಸಂಗ್ರಹಾಲಯದ ಫೇಸ್ಬುಕ್ ಪೇಜ್ ನಲ್ಲಿ ತಾಯಿ ಪಾಂಡಾವೊಂದು ಅದರ ಮರಿಯ ಸುತ್ತಲೂ ಆಡುವ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. “ಬರ್ಲಿನ್ ಪ್ರಾಣಿ ಸಂಗ್ರಹಾಲಯದ ಪಾಂಡಾಗಳ ಆಟ ಮತ್ತು ಮೋಜು” ಎಂಬ ಅಡಿ ಬರಹದೊಂದಿಗೆ ವಿಡಿಯೋ ಪೋಸ್ಟ್ ಮಾಡಲಾಗಿದೆ.

ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಗಳು ಬಂದಿವೆ. ವಿಡಿಯೋ ಅತ್ಯಂತ ಅಪರೂಪದ್ದಾಗಿದ್ದು, ಇಡೀ ದಿನ ನೋಡುತ್ತ ಕೂರುವಂತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Spiel und Spaß bei den Pandas im Zoo Berlin

Ein kleiner Lichtblick in schwierigen Zeiten ?Während Paule ? sich für ein Nickerchen auf den Baum verzogen hat, weicht Panda Pit ? seiner Mutter partout nicht von der Seite. Noch nicht mal ein kühlendes Bad kann sich Meng Meng ungestört gönnen, ohne vom Nachwuchs mit einem Kniff in die Seite geneckt zu werden. Schlussendlich lässt sich die Bärenmutter von Panda Pit dann doch noch zu einer Klettertour überreden. Die Panda-Zwillinge bringen mittlerweile jeweils rund 19 kg auf die Waage und kauen bereits auf frischem Bambus herum. Erst wenn sie jedoch ein vollständiges Gebiss haben, werden sie die Muttermilch reduzieren und auf feste Nahrung umstellen.❗️ Bitte beachtet: Die Panda-Brüder Pit ? und Paule ? sowie Panda-Mama Meng Meng sind nur werktags (nicht am Wochenende, an Feiertagen oder langen Wochenenden) und nur mit etwas Glück zu sehen. Dies können wir derzeit leider nur an Tagen mit vergleichsweise wenigen Besuchern ermöglichen.

Posted by Zoo Berlin on Wednesday, June 3, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...