alex Certify Video | ಸಿಂಹದ ಮರಿಗಳನ್ನು ಅಪ್ಪಿ ಮುದ್ದಾಡಿದ ಚಿಂಪಾಂಜ಼ಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಸಿಂಹದ ಮರಿಗಳನ್ನು ಅಪ್ಪಿ ಮುದ್ದಾಡಿದ ಚಿಂಪಾಂಜ಼ಿ

ಪರಿಶುದ್ಧ ಮನಸ್ಸಿನ ಸ್ನೇಹ ಪ್ರೀತಿಗಳನ್ನು ನೋಡಬೇಕೆಂದಲ್ಲಿ ಮಾನವರಿಗಿಂತ ಪ್ರಾಣಿಗಳ ವಿಡಿಯೋಗಳನ್ನು ನೋಡಬೇಕು. ಇದೀಗ ಸಿಂಹದ ಮರಿಯೊಂದನ್ನು ಅಪ್ಪಿ ಮುದ್ದು ಮಾಡುತ್ತಿರುವ ಚಿಂಪಾಂಜಿಯೊಂದರ ವಿಡಿಯೋ ವೈರಲ್ ಆಗಿದೆ.

ಮಿಯಾಮಿ ಮೃಗಾಲಯದಲ್ಲಿ ಸೆರೆ ಹಿಡಿದಿರುವ ಈ ವಿಡಿಯೋದಲ್ಲಿ ಎರಡೂ ಜೀವಿಗಳ ಮುದ್ದು ಮುದ್ದಾದ ಸಂವಹನ ನೋಡಲು ಬಲು ಮಜವಾಗಿದೆ. ಮಿಯಾಮಿ ಮೃಗಾಲಯ ವನ್ಯಜೀವಿ ಪ್ರತಿಷ್ಠಾನದ ಉದ್ಯೋಗಿ ಲ್ಯಾಂಡನ್ ಶೆರ‍್ರ್‌‌ ಈ ವಿಡಿಯೋ ಸೆರೆ ಹಿಡಿದು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. .

“ಲಿಂಬಾನಿ ಚಿಂಪಾಂಜ಼ಿ ಸಿಂಹದ ಮರಿಗಳನ್ನು ಭೇಟಿ ಮಾಡುತ್ತಿರುವ ಚಿತ್ರ,” ಎಂದು ಕ್ಯಾಪ್ಷನ್ ಕೊಟ್ಟು ಶೇರ್‌ ಮಾಡಲಾಗಿರುವ ಈ ವಿಡಿಯೋದಲ್ಲಿ, “ಮಿತ್ರರೇ, ಇಂದು ನಾವು ಇದೀಗ ತಾನೇ ಜನಿಸಿದ ಸಿಂಹದ ಮರಿಗಳಿಗೆ ಲಿಂಬಾನಿ ಚಿಂಪಾಜ಼ಿಯನ್ನು ಪರಿಚಯಿಸುತ್ತಿದ್ದೇವೆ,” ಎಂದು ಹೇಳುತ್ತಿರುವುದನ್ನು ಕೇಳಿಬಹುದಾಗಿದೆ.

ತಮ್ಮ ಆಟಿಕೆಗಳೊಂದಿಗೆ ಆಟವಾಡುತ್ತಿರುವ ಸಿಂಹದ ಮರಿಗಳನ್ನು ನೋಡುತ್ತಲೇ ಅವುಗಳನ್ನು ಅಪ್ಪಿ ಮುದ್ದಾಡುವ ಚಿಂಪಾಜ಼ಿಯ ಔದಾರ್ಯವನ್ನು ನೋಡುವುದೇ ಒಂದು ಆನಂದ.

ಈ ವಿಡಿಯೋಗೆ ಬ್ಯಾಕ್ ಗ್ರೌಂಡ್‌ನಲ್ಲಿ ಕೊಡಲಾದ ಸಂಗೀತದ ನಿರ್ಮಾಪಕ ಕಾಲಂ ಸ್ಕಾಟ್‌, “ಈ ವಿಡಿಯೋಗೆ ನನ್ನ ಹಾಡನ್ನು ಬಳಸಿರುವುದು ನನ್ನ ಸೌಭಾಗ್ಯ,” ಎಂದಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...