alex Certify ಕಾಲರ್‌ ಬೋನ್‌ ಇಲ್ಲದ ಈತ ತೋಳುಗಳಲ್ಲೇ ಚಪ್ಪಾಳೆ ಹೊಡೆಯಬಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲರ್‌ ಬೋನ್‌ ಇಲ್ಲದ ಈತ ತೋಳುಗಳಲ್ಲೇ ಚಪ್ಪಾಳೆ ಹೊಡೆಯಬಲ್ಲ

ತನ್ನ ತೋಳುಗಳನ್ನು ಬಳಸಿ ಚಪ್ಪಾಳೆ ಹೊಡೆಯಬಲ್ಲ ಇಂಡಿಯಾನಾದ ನಿವಾಸಿ ಕೋರೆ ಬೆನ್ನೆಟ್‌ ಎಂಬ ಹುಡುಗ ಸುದ್ದಿಯಲ್ಲಿದ್ದಾನೆ. ಅಪರೂಪದ ದೈಹಿಕ ಸವಾಲು ಎದುರಿಸುತ್ತಿರುವ ಈತನಿಗೆ ಹಲ್ಲುಗಳು ಹಾಗೂ ಎಲುಬುಗಳ ಬೆಳವಣಿಗೆ ಸರಿಯಾಗಿ ಆಗಿಲ್ಲ.

ಇದೀಗ ತನ್ನ ಸವಾಲನ್ನೇ ಅವಕಾಶವನ್ನಾಗಿ ಮಾಡಿಕೊಂಡಿರುವ ಈ ಬಾಲಕ, ತೋಳುಗಳನ್ನು ಬಳಸಿ ಚಪ್ಪಾಳೆ ಹೊಡೆದು, ಜನರು ಹುಬ್ಬೇರಿಸುವ ಸ್ಟಂಟ್‌ಗಳನ್ನೂ ಮಾಡಿ ಸಂಚಲನ ಸೃಷ್ಟಿಸಿದ್ದಾನೆ.

ಕ್ಲೈಡೋಕ್ರೇನಿಯಲ್ ಡಿಸ್ಪ್ಲೇಸಿಯಾ ಎಂಬ ಅಪರೂಪದ ವಂಶವಾಹಿ ಸಮಸ್ಯೆಯಿಂದ ಬಳಲುತ್ತಿರುವ ಈ ಬಾಲಕನಿಗೆ ಕಾಲರ್‌ ಎಲುಬುಗಳು ಇಲ್ಲ.

ಪತ್ನಿಯ ಗುಪ್ತಾಂಗದೊಳಕ್ಕೆ ಮದ್ಯದ ಬಾಟಲಿ ತೂರಿದ ಪಾಪಿ ಪತಿ..!

“ಕುಳ್ಳಗಿದ್ದು, ಕೆಟ್ಟ ಹಲ್ಲುಗಳು ಹಾಗೂ ದೊಡ್ಡ ತಲೆ ಹೊಂದಿರುವ ಕಾರಣಕ್ಕೆ ನನ್ನನ್ನು ಆಡಿಕೊಳ್ಳಲಾಗುತ್ತಿತ್ತು. ಈ ಪರಿಸ್ಥಿತಿಯನ್ನು ನಾನು ಪ್ರೀತಿಸುತ್ತಿದ್ದು, ಇದು ನಿಜಕ್ಕೂ ಚೆನ್ನಾಗಿದೆ – ಕ್ಲೈಡೋಕ್ರೇನಿಯಲ್ ಡಿಸ್ಪ್ಲೇಸಿಯಾ ಸಮಸ್ಯೆಯ ನಡುವೆಯೂ ನಾನು ಎಲ್ಲವನ್ನೂ ಮಾಡಬಲ್ಲೆ,” ಎಂದು ಆತ್ಮವಿಶ್ವಾಸದ ನಗೆ ಬೀರುತ್ತಾನೆ ಬೆನ್ನೆಟ್.

ಸಾಮಾಜಿಕ ಜಾಲತಾಣದಲ್ಲಿ ತನ್ನ ಸ್ಟಂಟ್‌ಗಳನ್ನು ತೋರುವುದಲ್ಲದೇ ಆಂಗಿಕ ರಚನೆಯಲ್ಲಾಗುವ ವ್ಯತ್ಯಯಗಳ ಕುರಿತು ಜನರಿಗೆ ಅರಿವು ಮೂಡಿಸುತ್ತಿದ್ದಾನೆ ಬೆನ್ನೆಟ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...