alex Certify ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಿಗುತ್ತೆ ʼಚಪ್ಪಾಳೆʼ ತಟ್ಟುವುದರಿಂದ ಹಲವು ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಿಗುತ್ತೆ ʼಚಪ್ಪಾಳೆʼ ತಟ್ಟುವುದರಿಂದ ಹಲವು ಪ್ರಯೋಜನ

ಲಾಫಿಂಗ್ ಕ್ಲಬ್ ಗಳಲ್ಲಿ ಹಿರಿಯರನ್ನೆಲ್ಲಾ ಒಟ್ಟು ಹಾಕಿಕೊಂಡು ನಗುವ ವೇಳೆ ಅಲ್ಲಿ ಚಪ್ಪಾಳೆಗೆ ಮಹತ್ವದ ಸ್ಥಾನ ನೀಡಿರುತ್ತಾರೆ. ಇದರ ಹಿಂದಿನ ನಿಜವಾದ ಕಾರಣ ಏನು ಗೊತ್ತೇ…?

ವಯಸ್ಸಾದವರಿಗೂ ಚಪ್ಪಾಳೆ ತಟ್ಟಲು ತರಬೇತಿ ಕೊಡುವ ಮುಖ್ಯ ಕಾರಣ ಇಷ್ಟೇ. ಅಂಗೈನಲ್ಲಿ 28 ಆಕ್ಯುಪ್ರೆಶರ್ ಪಾಯಿಂಟ್ ಗಳಿವೆ. ಚಪ್ಪಾಳೆ ತಟ್ಟುವ ಮೂಲಕ ಈ ಎಲ್ಲಾ ಪಾಯಿಂಟ್ ಗಳೂ ಆಕ್ಟಿವೇಟ್ ಆಗುತ್ತವೆ ಮತ್ತು ನಿಮ್ಮ ಆರೋಗ್ಯ ವೃದ್ಧಿಗೆ ಸಹಕರಿಸುತ್ತವೆ.

ಈ ಪಾಯಿಂಟ್ ಗಳಿಗೂ ದೇಹದ ಆರೋಗ್ಯಕ್ಕೂ ನೇರವಾದ ಸಂಬಂಧವಿದೆ. ಹಾಗಾಗಿ ಚಪ್ಪಾಳೆ ತಟ್ಟುವುದು ಮಕ್ಕಳಿಂದ ಹಿಡಿದು ಎಲ್ಲರಿಗೂ ಬಹಳ ಒಳ್ಳೆಯದು.

ಕೊಬ್ಬರಿ ಎಣ್ಣೆಯನ್ನು ಅಂಗೈಗೆ ಹಾಕಿಕೊಂಡು ರಭಸದಿಂದ ಹತ್ತು ನಿಮಿಷಗಳ ಕಾಲ ಉಜ್ಜಬೇಕು. ಬೆರಳು ಮತ್ತು ಅಂಗೈ ನಡುವಿನ ಈ ವ್ಯಾಯಾಮವನ್ನು ನಿತ್ಯ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

ಇದರಿಂದ ದೇಹದಲ್ಲಿ ರಕ್ತ ಸರಾಗವಾಗಿ ಹರಿದು, ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ. ಅಜೀರ್ಣದ ಸಮಸ್ಯೆ ದೂರವಾಗುತ್ತದೆ. ರಕ್ತದೊತ್ತಡ ನಿವಾರಣೆಯಾಗಿ ಹೃದಯ ಮತ್ತು ಕರುಳು ಸಮಸ್ಯೆ ಮುಕ್ತವಾಗುತ್ತವೆ. ಮೆದುಳು ಕೂಡಾ ಚುರುಕಾಗುತ್ತದೆ. ಹಾಗಾಗಿ ಮಕ್ಕಳಿಗೆ ನಿತ್ಯ ಚಪ್ಪಾಳೆ ತಟ್ಟಲು ಹೇಳುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...