alex Certify ಗ್ಯಾಸ್ಟ್ರಿಕ್ ಸಮಸ್ಯೆ ಕಾಡದಂತೆ ವಹಿಸಿ ಈ ಮುನ್ನೆಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾಸ್ಟ್ರಿಕ್ ಸಮಸ್ಯೆ ಕಾಡದಂತೆ ವಹಿಸಿ ಈ ಮುನ್ನೆಚ್ಚರಿಕೆ

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು. ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ.

ಈ ರೀತಿಯ ಸಮಸ್ಯೆ ಪ್ರತಿನಿತ್ಯವೂ ನಿಮ್ಮನ್ನು ಕಾಡುತ್ತಿದ್ದರೆ, ವೈದ್ಯರನ್ನು ಕಾಣುವುದು ಉತ್ತಮ. ಆದರೆ ಯಾವಾಗಲಾದರೂ ಒಮ್ಮೆ ಕಂಡು ಬಂದಲ್ಲಿ ನೀವು ನಿಮ್ಮ ಮನೆಯಲ್ಲೇ ಸರಳವಾದ ಉಪಚಾರಗಳ ಮೂಲಕ ಈ ಸಮಸ್ಯೆಯಿಂದ ದೂರವಿರಬಹುದು.

ಚೂಯಿಂಗ್ ಗಮ್ ಅನ್ನು ನಿಲ್ಲಿಸಿ : ನಿಮಗೆ ಚೂಯಿಂಗ್ ಗಮ್ ಜಗಿಯುತ್ತಾ ಮಾತನಾಡುವ ಅಭ್ಯಾಸವಿದ್ದರೆ ಕೂಡಲೇ ನಿಲ್ಲಿಸಿ. ಏಕೆಂದರೆ, ಮಾತನಾಡುವಾಗ ಜೊತೆಗೆ ಗಾಳಿಯೂ ಒಳ ಸೇರಿ, ಹೊಟ್ಟೆ ಉಬ್ಬರ ಕಾಣಿಸಿಕೊಂಡು ಗ್ಯಾಸ್ ಉತ್ಪತ್ತಿಯಾಗುತ್ತದೆ.

ಹರ್ಬಲ್ ಡ್ರಿಂಕ್ಸ್ : ಹೊಟ್ಟೆಯಲ್ಲಿ ಸೇರಿರುವ ಗ್ಯಾಸನ್ನು ಶಮನ ಮಾಡಲು ಹರ್ಬಲ್ ಪಾನೀಯಗಳು ಬಹಳಾನೇ ಉತ್ತಮ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ವಾಯು ಪದಾರ್ಥಗಳನ್ನು ನಿಲ್ಲಿಸಿ : ಹೊಟ್ಟೆಗೆ ಗ್ಯಾಸ್ ಹೋಗದಂತೆ ಮಾಡಲು, ನೀವು ಸೇವಿಸುವ ಆಹಾರದಲ್ಲಿ ಗ್ಯಾಸ್ ಇರುವ ಆಹಾರಗಳನ್ನು ನಿಲ್ಲಿಸಿ. ಉದಾ: ಅವರೆಕಾಳು, ಬೇಳೆಗಳು, ಎಲೆಕೋಸು, ಮೂಲಂಗಿ ಇತ್ಯಾದಿ.

ಸೋಡಾ ಪಾನೀಯಗಳು : ಪೆಪ್ಸಿ, ಕೋಕಾಕೋಲ, ಸ್ಪ್ರೈಟ್ ಮುಂತಾದ ಸೋಡಾ ಇರುವಂತಹ ಪಾನೀಯಗಳನ್ನು ನಿಲ್ಲಿಸಿ. ಇದು ಹೊಟ್ಟೆಯಲ್ಲಿ ಗ್ಯಾಸ್ ಅನ್ನು ತುಂಬಿ ಸಮಸ್ಯೆಯನ್ನು ಇನ್ನೂ ಹೆಚ್ಚಿಸುತ್ತವೆ.

ನೀರು : ಊಟಕ್ಕೆ ಮುಂಚೆ ಕನಿಷ್ಟ ಒಂದು ಗ್ಲಾಸ್ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ನೀರು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...