alex Certify ಗೂಳಿ ಮಾಡಿದ ಯಡವಟ್ಟಿಗೆ 800 ಮನೆಗಳ ವಿದ್ಯುತ್ ಸಂಪರ್ಕ ಕಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಳಿ ಮಾಡಿದ ಯಡವಟ್ಟಿಗೆ 800 ಮನೆಗಳ ವಿದ್ಯುತ್ ಸಂಪರ್ಕ ಕಟ್

ತುರಿಕೆ ಎಂಬುದು ಮನುಷ್ಯ ಹಾಗೂ ಪ್ರಾಣಿಗಳಿಗೆ ಸಹಜ ವಿಚಾರ ಮತ್ತು ಕಿರಿಕಿರಿ ಮಾಡುವ ಸಂಗತಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ಗೂಳಿಯೊಂದು ತುರಿಸಿಕೊಂಡ ಅಬ್ಬರಕ್ಕೆ 800 ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಸ್ಕಾಟ್ ಲ್ಯಾಂಡ್ ನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಗೂಳಿ ವಿದ್ಯುತ್ ಕಂಬಕ್ಕೆ ಮೈಯೊಡ್ಡಿ ತುರಿಸಿಕೊಳ್ಳುತ್ತಿದ್ದಾಗ ಟ್ರಾನ್ಸ್ಫಾರ್ಮರ್ ಪೆಟ್ಟಿಗೆಗೆ ಬಡಿದಿದೆ. ಇದನ್ನು ಗಮನಿಸಿದ ಅದರ ಮಾಲೀಕ ತಕ್ಷಣವೇ ವಿದ್ಯುತ್ ಅವಘಡದಿಂದ ಅದನ್ಮು ರಕ್ಷಿಸಿದ್ದಾರೆ.

ಗೂಳಿಗೆ ಯಾವುದೇ ಅಪಘಾತವಾಗದಿದ್ದರೂ
ದಕ್ಷಿಣ ಲಾನಾರ್ಕ್‌ಷೈರ್‌ನ ಹತ್ತಿರದ ಮೂರು ಹಳ್ಳಿಗಳಲ್ಲಿ ವಾಸಿಸುವ 800 ಮನೆಯವರು ಹಲವು ಗಂಟೆ ವಿದ್ಯುತ್ ಇಲ್ಲದೆ ಪರದಾಡಬೇಕಾಯಿತು.

ಘಟನೆಯ ಬಳಿಕ, ಜಮೀನಿನ ಮಾಲೀಕ ತನ್ನ ಸ್ಥಳೀಯ ಫೇಸ್‌ಬುಕ್ ಗುಂಪಿನಲ್ಲಿ ಕ್ಷಮೆ ಯಾಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...