alex Certify 6 ವರ್ಷದ ಬಾಲಕನಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಟಾಸ್ಕ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ವರ್ಷದ ಬಾಲಕನಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಟಾಸ್ಕ್ ವೈರಲ್

Builder's 'Pay Packet' for a 6-Year-Old Boy who Helped Him Build a ...

ಈ ಘಟನೆ ನಿಮ್ಮ ಹೃದಯ ತುಂಬುವಂತೆ ಮಾಡುತ್ತದೆ. ಬಿಲ್ಡರ್ ಒಬ್ಬ 6 ವರ್ಷದ ಬಾಲಕನಿಗೆ ಕಟ್ಟಡ ನಿರ್ಮಾಣಕ್ಕೆ ನೀಡಿದ ಟಾಸ್ಕ್ ಒಂದರ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವಿಸ್ಮಯ ಹಾಗೂ ಮೆಚ್ಚುಗೆಗೆ ಕಾರಣವಾಗಿದೆ.

ಬಿಲ್ಡರ್ ಬರೆದುಕೊಟ್ಟ ಕಟ್ಟಡ ನಿರ್ಮಾಣದ ಅಂಶಗಳ ಪಟ್ಟಿಯನ್ನು ಬಾಲಕನ ತಾಯಿ ಟ್ವೀಟ್ ಮಾಡಿದ್ದಾರೆ.
“ನಾವು ನಮ್ಮ ಮನೆಯಲ್ಲಿ ಒಳಾಂಗಣ ಕಾಮಗಾರಿ ಕೈಗೊಂಡಿದ್ದೇವೆ. 6 ವರ್ಷದ ಬಾಲಕ ಬಿಲ್ಡರ್ ಗೆ ಸಹಾಯ ಮಾಡುವ ಇಚ್ಛೆ ಹೊಂದಿದ್ದಾನೆ” ಎಂದು ತಾಯಿ ಬರೆದಿದ್ದಾರೆ.

ಬಿಲ್ಡರ್ ನೀಡಿದ ನೋಟ್ ನಲ್ಲಿ, ಇಟ್ಟಿಗೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು, ನೆಲಘಟ್ಟು ನಿರ್ಮಿಸಿಕೊಳ್ಳಬೇಕು, ಸಿಮೆಂಟ್ ಮಿಶ್ರಣ ತಯಾರಿಸಬೇಕು, ಕಲ್ಲು ಹಾಕಬೇಕು ಹಾಗೂ ಕಪ್ಪು ಹಕ್ಕಿ ಮತ್ತು ಜೇಡರ ಫೋಟೋ ತೆಗೆದುಕೊಳ್ಳಬೇಕು ಎಂದು ಬರೆಯಲಾಗಿದೆ. ಆದರೆ ಈ ಪೋಸ್ಟ್ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದು, ಮಕ್ಕಳನ್ನು ನಿರ್ಮಾಣ ಕಾರ್ಯದಿಂದ ದೂರ ಇಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...