alex Certify ಉಲ್ಟಾ ಪಲ್ಟಾ ಡ್ರೆಸ್​ ಹಾಕಿ ಪೇಚಿಗೆ ಸಿಲುಕಿದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಲ್ಟಾ ಪಲ್ಟಾ ಡ್ರೆಸ್​ ಹಾಕಿ ಪೇಚಿಗೆ ಸಿಲುಕಿದ ಮಹಿಳೆ..!

ಮದುವೆ ಅಂದಕೂಡಲೇ ಮಹಿಳೆಯರಿಗೆ ಮೊದಲು ನೆನಪಾಗೋದೇ ಮದುವೆಯ ಧಿರಿಸು. ಅದೇ ರೀತಿ ತನ್ನ ಮದುವೆಗೆಂದು ಪ್ರತಿಷ್ಠಿತ ಕಂಪನಿಯಿಂದ ಗೌನ್​ ತರಿಸಿದ್ದ ಮಹಿಳೆ ಬಳಿಕ ತನ್ನ ತಪ್ಪಿನಿಂದಾದ ಮುಜಗುರವನ್ನ ಸ್ವತಃ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾಳೆ.

ಕೆಂಟುಕಿ ಮೂಲದ ಮಹಿಳೆ ವಸ್ತ್ರ ವಿನ್ಯಾಸಕ ಕಂಪನಿಯಲ್ಲಿ ಗೌನ್​ ಆರ್ಡರ್​ ಮಾಡಿದ್ದರು. 2 ವಾರದ ಬಳಿಕ ಗೌನ್​ ಪಡೆದ ಮಹಿಳೆ ಅದನ್ನ ನೋಡಿ ಸಿಟ್ಟಾಗಿದ್ದಾರೆ . ಮಾತ್ರವಲ್ಲದೇ ನೀವು ವಸ್ತ್ರವನ್ನ ತಪ್ಪಾಗಿ ವಿನ್ಯಾಸ ಮಾಡಿದ್ದೀರಿ ಅಂತಾ ಇ ಮೇಲ್​ ಹಾಕಿದ್ದು ಮಾತ್ರವಲ್ಲದೇ ಫೋಟೋ ಕೂಡ ಶೇರ್​ ಮಾಡಿ ಆಕ್ರೋಶ ಹೊರಹಾಕಿದ್ದಳು.

ಮಹಿಳೆಯ ಇಮೇಲ್​ ನೋಡಿದ ಕಂಪನಿ, ನೀವು ಗೌನ್​ನ್ನ ತಪ್ಪಾಗಿ ಹಾಕಿದ್ದೀರಿ. ಅದನ್ನ ಉಲ್ಟಾ ಪಲ್ಟಾ ಮಾಡಿ ಧರಿಸಿದ್ದೀರಾ ಎಂದು ಸೌಮ್ಯವಾಗೇ ಮೇಲ್​ ಮಾಡಿದೆ. ತನ್ನ ತಪ್ಪಿನಿಂದಾದ ಈ ಅನುಭವವನ್ನ ಮಹಿಳೆ ಫೇಸ್​ಬುಕ್ ನಲ್ಲಿ​ ಶೇರ್​ ಮಾಡಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...