alex Certify ಮದುವೆ ಮಂಟಪಕ್ಕೆ ರಾಯಲ್​ ಎನ್​ಫೀಲ್ಡ್​ನಲ್ಲಿ ಎಂಟ್ರಿಕೊಟ್ಟ ವಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮಂಟಪಕ್ಕೆ ರಾಯಲ್​ ಎನ್​ಫೀಲ್ಡ್​ನಲ್ಲಿ ಎಂಟ್ರಿಕೊಟ್ಟ ವಧು

ಪ್ರೀ ವೆಡ್ಡಿಂಗ್​, ವೆಡ್ಡಿಂಗ್​, ಪೋಸ್ಟ್​ ವೆಡ್ಡಿಂಗ್​ ಫೋಟೋ ಶೂಟ್​ನಲ್ಲಿ ಕ್ರಿಯಾಶೀಲತೆ ತರುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ. ಅನೇಕ ಸಾಹಸಗಳು ಕೂಡ ಮಾಡಲಾಗುತ್ತಿದೆ.

ಇಲ್ಲೊಬ್ಬಳು ಮಧುಮಗಳು ಮದುವೆ ಮಂಟಪಕ್ಕೆ ರಾಯಲ್​ ಎನ್​ಫೀಲ್ಡ್​ನಲ್ಲಿ ರಾಯಲ್​ ಆಗಿ ಎಂಟ್ರಿಕೊಟ್ಟಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇದು ಪ್ರೀ ವೆಡ್ಡಿಂಗ್​ ಫೋಟೋ ಶೂಟ್​ ಇರಬಹುದೇ ಎಂಬುದು ಖಚಿತವಿಲ್ಲ. ಆದರೆ, ಮಧುಮಗಳು ಅದ್ಧೂರಿಯಾಗಿ ಹೊರಟಿರುವುದು ವಿಶೇಷವೆನಿಸುತ್ತದೆ.

ಈ ವಿಡಿಯೋವನ್ನು ಮೇಕಪ್​ ಆರ್ಟಿಸ್ಟ್ ದೀಪಾಲಿ ಹಾಗೂ ವಧು ವೈಶಾಲಿ ಚೌಧರಿ ಇನ್ ಸ್ಟಾಗ್ರಾಮ್​ ನಲ್ಲಿ ಪೋಸ್ಟ್​ ಮಾಡಿದ್ದಾರೆ. ವಧು ದೆಹಲಿಯವರಾಗಿದ್ದು, ಸದ್ಯ ವಿಡಿಯೋ 1 ಮಿಲಿಯನ್​ಗೂ ಹೆಚ್ಚು ವೀಕ್ಷಣೆಯಾಗಿದೆ.

ತನ್ನ ಮದುವೆ ದಿನದಂದು ಮದುವೆಯ ಸ್ಥಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವುದು ಪ್ರತಿಯೊಬ್ಬ ವಧುವಿನ ಕನಸಾಗಿರುತ್ತದೆ. ಆದರೆ ಈ ವಧು ಮಾಡಿದ ಸಾಹಸವನ್ನು ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ.

ಭಾರವಾದ ಲೆಹೆಂಗಾ ಧರಿಸಿದ್ದ ವಧು ವೈಶಾಲಿ ರಾಯಲ್​ ಎನ್​ಫೀಲ್ಡ್​ ಅನ್ನು ತುಂಬಾ ಲೀಲಾಜಾಲವಾಗಿ ಓಡಿಸಿದ್ದು, ಆತ್ಮವಿಶ್ವಾಸದ ಜತೆಗೆ ಸವಾರಿಯನ್ನು ಆನಂದಿಸುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಭಾರವಾದ ಆಭರಣ ಮತ್ತು ಲೆಹೆಂಗಾವನ್ನು ಧರಿಸಿ ಹೇಗೆ ಬೈಕ್​ ಓಡಿಸಿದರು ಎಂಬುದು ಸಾಕಷ್ಟು ಅಚ್ಚರಿ ಎನಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...