ಮದುವೆ ಅಂದಕೂಡಲೇ ಮಹಿಳೆಯರಿಗೆ ಮೊದಲು ನೆನಪಾಗೋದೇ ಮದುವೆಯ ಧಿರಿಸು. ಅದೇ ರೀತಿ ತನ್ನ ಮದುವೆಗೆಂದು ಪ್ರತಿಷ್ಠಿತ ಕಂಪನಿಯಿಂದ ಗೌನ್ ತರಿಸಿದ್ದ ಮಹಿಳೆ ಬಳಿಕ ತನ್ನ ತಪ್ಪಿನಿಂದಾದ ಮುಜಗುರವನ್ನ ಸ್ವತಃ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾಳೆ.
ಕೆಂಟುಕಿ ಮೂಲದ ಮಹಿಳೆ ವಸ್ತ್ರ ವಿನ್ಯಾಸಕ ಕಂಪನಿಯಲ್ಲಿ ಗೌನ್ ಆರ್ಡರ್ ಮಾಡಿದ್ದರು. 2 ವಾರದ ಬಳಿಕ ಗೌನ್ ಪಡೆದ ಮಹಿಳೆ ಅದನ್ನ ನೋಡಿ ಸಿಟ್ಟಾಗಿದ್ದಾರೆ . ಮಾತ್ರವಲ್ಲದೇ ನೀವು ವಸ್ತ್ರವನ್ನ ತಪ್ಪಾಗಿ ವಿನ್ಯಾಸ ಮಾಡಿದ್ದೀರಿ ಅಂತಾ ಇ ಮೇಲ್ ಹಾಕಿದ್ದು ಮಾತ್ರವಲ್ಲದೇ ಫೋಟೋ ಕೂಡ ಶೇರ್ ಮಾಡಿ ಆಕ್ರೋಶ ಹೊರಹಾಕಿದ್ದಳು.
ಮಹಿಳೆಯ ಇಮೇಲ್ ನೋಡಿದ ಕಂಪನಿ, ನೀವು ಗೌನ್ನ್ನ ತಪ್ಪಾಗಿ ಹಾಕಿದ್ದೀರಿ. ಅದನ್ನ ಉಲ್ಟಾ ಪಲ್ಟಾ ಮಾಡಿ ಧರಿಸಿದ್ದೀರಾ ಎಂದು ಸೌಮ್ಯವಾಗೇ ಮೇಲ್ ಮಾಡಿದೆ. ತನ್ನ ತಪ್ಪಿನಿಂದಾದ ಈ ಅನುಭವವನ್ನ ಮಹಿಳೆ ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.