alex Certify ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸ್ತು ಸೆಕೆಂಡ್ ಹ್ಯಾಂಡ್​ ಪಿಂಗಾಣಿ ಪಾತ್ರೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸ್ತು ಸೆಕೆಂಡ್ ಹ್ಯಾಂಡ್​ ಪಿಂಗಾಣಿ ಪಾತ್ರೆ..!

ಯಾರ್ಡ್ ಸೇಲ್​ ಇಲ್ಲವೇ ಗ್ಯಾರೇಜ್​ ಸೇಲ್​ ಎಂದು ಕರೆಯಲ್ಪಡುವ ವ್ಯಾಪಾರದಲ್ಲಿ ಬಳಕೆಯಾದ ವಸ್ತುಗಳನ್ನ ಮಾರಾಟ ಮಾಡಲಾಗುತ್ತೆ. ಇಂತಹ ಸ್ಥಳದಲ್ಲಿ ವಸ್ತುಗಳನ್ನ ಮಾರಾಟ ಮಾಡೋಕೆ ವ್ಯಾಪಾರಿಗಳು ಪರವಾನಗಿ ಹೊಂದಿರಬೇಕು ಎಂಬ ನಿಬಂಧನೆಯೂ ಇರೋದಿಲ್ಲ.

ಅಂದಹಾಗೆ ಯಾವುದೋ ದೇಶದಲ್ಲಿ ನಡೆಯುವ ಈ ಯಾರ್ಡ್ ಸೇಲ್​ ಬಗ್ಗೆ ನಾವೇಕೆ ಮಾತನಾಡುತ್ತಿದ್ದೇವೆ ಎಂದು ಕೊಂಡ್ರಾ..? ಯಾಕಂದ್ರೆ ಅಮೆರಿಕದಲ್ಲಿ ಯಾರ್ಡ್ ಸೇಲ್​ನಲ್ಲಿ ನಡೆದ ಘಟನೆಯೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ಸೆಕೆಂಡ್​ ಹ್ಯಾಂಡ್​ ಸೇಲ್​​ನಲ್ಲಿ ವ್ಯಕ್ತಿಯೊಬ್ಬರು 2500 ರೂಪಾಯಿ ಕೊಟ್ಟು ಪಿಂಗಾಣಿ ಪಾತ್ರೆಯೊಂದನ್ನ ಖರೀದಿ ಮಾಡಿದ್ದರು. ಆದರೆ ಬಳಿಕ ಈ ಪಿಂಗಾಣಿ ಪಾತ್ರೆ ಚೀನಾದ 15ನೇ ಶತಮಾನದ ಪುರಾತನ ಕಲಾಕೃತಿ ಎಂದು ತಿಳಿದುಬಂದಿದೆ. ಈ ಪಿಂಗಾಣಿ ಪಾತ್ರೆಯ ಮೌಲ್ಯ ಅಂದಾಜು 3,64,72,500 ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ.

ಚೀನಾದ ಕಲಾಕೃತಿ ಎನ್ನಲಾದ ಈ ಪಿಂಗಾಣಿ ಪಾತ್ರೆಯಲ್ಲಿ ನೀಲಿ ಬಣ್ಣದಲ್ಲಿ ಹೂಗಳ ಚಿತ್ರವನ್ನ ಬಿಡಿಸಲಾಗಿದೆ. ಇದು 6 ಇಂಚು ವ್ಯಾಸ ಹೊಂದಿದೆ. ಈ ಪಾತ್ರೆ ಇದೀಗ ಸೋಥೆಬಿಸ್​​ನಲ್ಲಿ ಹರಾಜಿಗೆ ಮಾರಾಟವಾಗಲಿದೆ. ಜಗತ್ತಿನಲ್ಲಿ ಇಂತಹ 7 ಪಾತ್ರೆಗಳು ಇರಬಹುದು ಎಂದು ಅಂದಾಜಿಸಲಾಗಿದ್ದು ಅದರಲ್ಲಿ ಒಂದು ಪಾತ್ರೆ ಇದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...