alex Certify ಅಬ್ಬಬ್ಬಾ…! ದೋಣಿಯೊಂದರಲ್ಲೇ ಸಂಗ್ರಹವಾಗಿದೆ 103 ಟನ್ ಪ್ಲಾಸ್ಟಿಕ್ ತ್ಯಾಜ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ದೋಣಿಯೊಂದರಲ್ಲೇ ಸಂಗ್ರಹವಾಗಿದೆ 103 ಟನ್ ಪ್ಲಾಸ್ಟಿಕ್ ತ್ಯಾಜ್ಯ

ಹುಲು ಮಾನವರು ಪ್ರತಿನಿತ್ಯ ಸಾಗರದ ಒಡಲಿಗೆ ಅದೆಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕುತ್ತಿದ್ದಾರೆ ಎಂದು ಪ್ರತಿನಿತ್ಯ ಓದುತ್ತಲೇ ಇರುತ್ತೇವೆ. ಇದೀಗ, ಅಮೆರಿಕಾದ ಓಷಿಯನ್ ವಾಯೇಜಸ್ ಸಂಸ್ಥೆಯ ದೋಣಿಯೊಂದು ಪೆಸಿಫಿಕ್ ಸಾಗರದಿಂದ ಭಾರೀ ಮೊತ್ತದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆದಿದೆ.

ಇತಿಹಾಸದಲ್ಲೇ ಅತಿ ದೊಡ್ಡದಾದ ಕ್ಲೀನ್ ಅಪ್‌ ಕಾರ್ಯಾಚರಣೆಗೆ ಇಳಿದಿದ್ದ ಈ ದೋಣಿಯು, ಹವಾಯಿ ದ್ವೀಪದ ಹೊನೊಲುಲುನಿಂದ 48 ದಿನಗಳ ಕಾಲ ಸಾಗರದಲ್ಲಿ ಅಲೆದಾಡಿ, 2,06,000 ಪೌಂಡ್ ‌ಗಳಷ್ಟು ಮೀನಿನ ಬಲೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರಳಿ ಭೂಮಿಗೆ ತಂದಿದೆ.

ಈ ವರ್ಷದಲ್ಲಿ ಒಟ್ಟಾರೆ 103 ಟನ್‌ ಗಳಷ್ಟು ತ್ಯಾಜ್ಯವನ್ನು ಸಾಗರದಿಂದ ಹೊರ ತೆಗೆದಿರುವ ಈ ದೋಣಿಯು, ಸಾಗರದಾಳದ ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ತಗ್ಗಿಸಲು ನೆರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...