alex Certify ಮನೆ ಬಾಗಿಲು ತೆರೆಯುತ್ತಿದ್ದಂತೆ ನಡೆದ ಘಟನೆಯಿಂದ ಬೆಚ್ಚಿಬಿದ್ಲು ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಗಿಲು ತೆರೆಯುತ್ತಿದ್ದಂತೆ ನಡೆದ ಘಟನೆಯಿಂದ ಬೆಚ್ಚಿಬಿದ್ಲು ಮಹಿಳೆ

ಹಾವನ್ನು ಕಂಡರೇ ಜೀವ ಹೋದಂತೆ ಆಗುತ್ತದೆ. ಇನ್ನು ತಲೆಯ ಮೇಲೇ ಹಾವೊಂದು ಬಿದ್ದುಬಿಟ್ಟರೆ…? ಇಂಥದ್ದೇ ಘಟನೆಯೊಂದು ಮಿಸಿಸ್ಸಿಪ್ಪಿಯಲ್ಲಿ ಜರುಗಿದೆ.

ಕ್ರಿಶ್ಚಿಯನ್ ಮೈಕೆಲ್ ಹೆಸರಿನ ಮಹಿಳೆಯೊಬ್ಬರು ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಬಾಗಿಲು ತೆರೆಯುತ್ತಲೇ ಬಾಗಿಲ ಮೇಲೆ ಕುಳಿತಿದ್ದ ಹಾವೊಂದು ಅವರ ನೆತ್ತಿ ಮೇಲೆ ಬಿದ್ದಿದೆ.

“ನನ್ನ ತಲೆ ಮೇಲೆ ಏನೋ ಗುದ್ದಿದ ಅನುಭವವಾಯಿತು. ಅದಾದ ಕೂಡಲೇ ಹಾವು ನನ್ನ ಕಾಲ ಬಳಿ ಬಿದ್ದಿದ್ದು ಕಂಡೆ” ಎಂದು ಮೈಕೆಲ್ ತಿಳಿಸಿದ್ದಾರೆ.

ಹತ್ತು ಇಂಚುಗಳಷ್ಟಿದ್ದ ಹಾವು ಕೂಡಲೇ ಅಡುಗೆ ಮನೆ ಸೇರಿಕೊಂಡಿದೆ. ಯಾರ ನೆರವನ್ನೂ ಕೇಳದ ಈ ದಿಟ್ಟ ಮಹಿಳೆ, ಪೊರಕೆಯೊಂದನ್ನು ಹಿಡಿದುಕೊಂಡು ಹಾವನ್ನು ತನ್ನ ಮನೆಯಿಂದ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...