alex Certify ಟ್ರಕ್​​ ಚಲಾಯಿಸಿಕೊಂಡು ಹೋಗ್ತಿದ್ದ ವೇಳೆ ಆಕಾಶದಿಂದ ಬಿತ್ತು ಮೀನು..! ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಕ್​​ ಚಲಾಯಿಸಿಕೊಂಡು ಹೋಗ್ತಿದ್ದ ವೇಳೆ ಆಕಾಶದಿಂದ ಬಿತ್ತು ಮೀನು..! ಮುಂದೇನಾಯ್ತು ನೋಡಿ

ವಾಹನ ಚಲಾವಣೆ ಮಾಡುವ ವೇಳೆ ಎಷ್ಟು ಜಾಗರೂಕರಾಗಿ ಇದ್ದರೂ ಸಹ ಅದು ಕಡಿಮೆಯೇ. ಸಣ್ಣ ಅಜಾಗರೂಕತೆಯಿಂದ ಉಸಿರೇ ನಿಂತು ಹೋಗುವ ಸಂಭವಗಳು ದಟ್ಟವಾಗಿ ಇರತ್ತೆ. ಇಂತಹದ್ದೇ ಒಂದು ವಿಚಿತ್ರ ಹಾಗೂ ಅಪಾಯಕಾರಿ ದೃಶ್ಯವೊಂದು ಟ್ರಕ್​ನ ಡ್ಯಾಶ್​ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ದೃಶ್ಯಾವಳಿಗಳನ್ನ ಅಮೆರಿಕದ ವಾರ್ಡ್ ಟ್ರಾನ್ಸ್​ಪೋರ್ಟ್ ಹಾಗೂ ಲಾಜಿಸ್ಟಿಕ್ಸ್​ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.

ವಾಹನ ಚಲಾವಣೆ ಮಾಡುವ ವೇಳೆ ಎಂತಹ ಸಂದಿಗ್ಧ ಸ್ಥಿತಿಯನ್ನ ಎದುರಿಸೋಕು ನೀವು ತಯಾರಿರಬೇಕು ಅನ್ನೋದನ್ನ ನಮ್ಮ ಷಾರ್ಲೆಟ್​ ಚಾಲಕ ಸಾಬೀತುಪಡಿಸಿದ್ದಾರೆ ಅಂತಾ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

20 ಸೆಕೆಂಡ್​ಗಳ ವಿಡಿಯೋದಲ್ಲಿ ಟ್ರಕ್​​ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಇದೇ ವೇಳೆ ಎದುರಿನಿಂದ ಬಂದ ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡಿದ್ದ ಮೀನನ್ನ ಟ್ರಕ್​​ನ ಮುಂದಿನ ಗಾಜಿನ ಮೇಲೆ ಬೀಳಿಸಿದೆ. ಇದರಿಂದ ಕಾರಿನ ಗಾಜು ಮಂಜು ಮಂಜಾಗಿದೆ.

ಆದರೆ ಇಂತಹ ಸಂದರ್ಭದಲ್ಲಿ ಟ್ರಕ್​ ಚಾಲಕ ನಿಯಂತ್ರಣ ತಪ್ಪದೇ ಯಶಸ್ವಿಯಾಗಿ ಟ್ರಕ್​ನ್ನು ಚಲಾಯಿಸಿದ್ದಾರೆ. ಇನ್ನು ಈ ಸಂಬಂಧ ಟ್ರಕ್​ ಕಂಪನಿ, ಟ್ರಕ್​ಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಚಾಲಕ ಕೂಡ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

— Ward Transport (@WardTransport) April 14, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...