alex Certify ಮನ ಕಲಕುತ್ತೆ ಕ್ಯಾನ್ಸರ್‌ ಪೀಡಿತ ಸಹೋದ್ಯೋಗಿಗಾಗಿ ಕ್ಷೌರಿಕ ಮಾಡಿದ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಕಲಕುತ್ತೆ ಕ್ಯಾನ್ಸರ್‌ ಪೀಡಿತ ಸಹೋದ್ಯೋಗಿಗಾಗಿ ಕ್ಷೌರಿಕ ಮಾಡಿದ ಕಾರ್ಯ

ಕ್ಯಾನ್ಸರ್​ ರೋಗಿಗೆ ಪ್ರೇರಣೆ ನೀಡುವ ಸಲುವಾಗಿ ಕ್ಷೌರಿಕನೊಬ್ಬ ತನ್ನ ಕೂದಲನ್ನೂ ಕತ್ತರಿಸಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಕ್ಯಾನ್ಸರ್​ ರೋಗಿ ನೆಫ್ತಾಲಿ ಮಾರ್ಟಿನ್​ ಈ ಹೃದಯಸ್ಪರ್ಶಿ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೃತ್ತಿಯಲ್ಲಿ ಕ್ಷೌರಿಕನಾಗಿರುವ ನೆಫ್ತಾಲಿ ಕಿಮೋಥೆರಪಿ ಚಿಕಿತ್ಸೆಯನ್ನ ಪಡೆಯುತ್ತಿದ್ದು ತಮ್ಮ ಕೂದಲನ್ನು ಶೇವ್​ ಮಾಡೋಕೆ ಸಹೋದ್ಯೋಗಿ ಜೋಲ್​ ಓರ್ಟೆಗಾ ಎಂಬವರ ಬಳಿ ಹೋಗಿದ್ದಾರೆ.

ಸ್ಪೇನ್​​ನವರಾದ ನೆಫ್ತಾಲಿ ತಮ್ಮ ಕೂದಲನ್ನ ಶೇವ್​ ಮಾಡುತ್ತಿರೋ ದೃಶ್ಯವನ್ನ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆದರೆ ನೆಫ್ತಾಲಿ ಕೂದಲನ್ನ ತೆಗೆದ ಬಳಿಕ ಓರ್ಟೆಗಾ ತಮ್ಮ ಕೂದಲನ್ನೂ ಶೇವ್​ ಮಾಡಿದ್ದು ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಕ್ಯಾನರ್​ ವಿರುದ್ಧದ ಹೋರಾಟದಲ್ಲಿ ಸಹೋದ್ಯೋಗಿಗೆ ಬೆಂಬಲ ನೀಡಿದ ಓರ್ಟೆಗಾ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...