alex Certify ಅಚ್ಚರಿಗೆ ಕಾರಣವಾಗಿದೆ ಎರಡು ಬಾಯಿ ಹೊಂದಿರುವ ಮಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಎರಡು ಬಾಯಿ ಹೊಂದಿರುವ ಮಗು

ಎರಡು ಬಾಯಿ ಹೊಂದಿದ ಅಪರೂಪದ ಮಗು ಜನನವಾಗಿದ್ದು, ವೈದ್ಯರಿಗೆ ಅದರ ಒಂದು ಬಾಯಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದ್ದಾರೆ.

ಅಪರೂಪವೆಂಬಂತೆ ಜನಿಸಿರುವ ಹೆಣ್ಣು ಮಗು, ಭ್ರೂಣದಲ್ಲಿ ಇದ್ದಾಗಲೇ ವೈದ್ಯರು ಸ್ಕ್ಯಾನ್ ಮಾಡಿದಾಗ ಮಗುವಿನ ಬಾಯಿಯ ಸಮೀಪದಲ್ಲಿ ಅತಿ ಹೆಚ್ಚಿನ ದ್ರವ್ಯರಾಶಿ ಕಂಡಿತ್ತಂತೆ. ಆದರೆ ಅದು ಏನೆಂದು ಖಚಿತ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಮಗು ಜನಿಸಿದಂತೆ ವೈದ್ಯರು ಗೊಂದಲಕ್ಕೊಳಗಾದರು, ಏಕೆಂದರೆ, ಹೆಚ್ಚುವರಿ ಬಾಯಿಗೆ, ತುಟಿ, ಹಲ್ಲಿನ‌ ವಸಡು, ಸಣ್ಣನಾಲಿಗೆ ಕಂಡುಬಂದಿದೆ. ಆದರೆ ಇದು ಮಗುವಿನ ಸಾಮಾನ್ಯ ದಿನಚರಿಗೆ ಯಾವುದೇ ಸಮಸ್ಯೆ ಮಾಡಲಿಲ್ಲ.

ಮಗುವಿಗೆ ಆರು ತಿಂಗಳಾಗುತ್ತಿದ್ದಂತೆ ವೈದ್ಯರು ಅದನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಇನ್ನೊಂದು ಬಾಯಿಯನ್ನು ತೆಗೆದುಹಾಕಿದ್ದಾರೆ, ಅದು ಗುಣಮುಖವಾಗಿದೆ.

ವಿವಿಧ ವೈದ್ಯಕೀಯ ಕೇಸ್ ಗಳನ್ನು ವರದಿ ಮಾಡುವ ಬಿಎಂಜೆ ಜರ್ನಲ್ ನಲ್ಲಿ ಎರಡು ಬಾಯಿ ಮಗುವಿನ ಕಥೆ ಪ್ರಕಟಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...