alex Certify ಬೆತ್ತಲೆ ನೃತ್ಯ ನೋಡಲೋಗಿ ಕೈ ಮುರಿದುಕೊಂಡ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲೆ ನೃತ್ಯ ನೋಡಲೋಗಿ ಕೈ ಮುರಿದುಕೊಂಡ ಭೂಪ…!

ಸ್ಟ್ರಿಪ್​​ ಕ್ಲಬ್​ಗೆ ಹೇಗಾದರೂ ಮಾಡಿ ಎಂಟ್ರಿ ಕೊಡಬೇಕು ಅಂತಾ ಪ್ಲಾನ್​ ಮಾಡಿದ 20 ವರ್ಷದ ಯುವಕ ಡ್ರೈನೇಜ್​ ಪಂಪ್​ ಮೂಲಕ ಕಟ್ಟಡ ಏರಲು ಹೋಗಿ ಆಯತಪ್ಪಿ ಬಿದ್ದ ಪರಿಣಾಮ ಕೈ ಮುರಿದುಕೊಂಡಿದ್ದಾನೆ.

ಯುವಕ ಸೋಮವಾರ ಮುಂಜಾನೆ ಸ್ಟ್ರಿಪ್​ ಕ್ಲ್​ಬ್​ ಗೋಡೆಯನ್ನ ಅಳೆಯಲು ಯತ್ನಿಸಿದ್ದಾನೆ. ಆಸ್ಟ್ರೇಲಿಯಾದ ಅಡಿಲೇಡ್​​ನ ಹಿಂಡ್ಲಿ ಬೀದಿಯಲ್ಲಿರುವ ಸ್ಟ್ರಿಪ್​ ಕ್ಲಬ್​ಗೆ ಎಂಟ್ರಿ ಕೊಡಲೇಬೇಕು ಎಂದು ಪ್ಲಾನ್ ಮಾಡಿ​ ಸುಮಾರು 9 ಅಡಿ ಎತ್ತರದಿಂದ ಆಯತಪ್ಪಿ ಬಿದ್ದಿದ್ದಾನೆ. ಇದರಿಂದ ಆತನ ತೋಳು ತುಂಡಾಗಿದೆ.

ಅಲ್ಲೇ ರಸ್ತೆಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಈ ವಿಡಿಯೋವನ್ನ ಚಿತ್ರೀಕರಿಸಿದ್ದಾನೆ. ಇದರಲ್ಲಿ ಆತ ಆಯತಪ್ಪಿ ಬೀಳೋದನ್ನ ನೋಡಬಹುದಾಗಿದೆ. ಈತನನ್ನ ರಾಯಲ್​ ಅಡಿಲೇಡ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...