alex Certify ಹೃದಯಾಕಾರದ ಮೀನಿನ ಮಧ್ಯೆ ಸೆರೆಯಾಯ್ತು ಶಾರ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಕಾರದ ಮೀನಿನ ಮಧ್ಯೆ ಸೆರೆಯಾಯ್ತು ಶಾರ್ಕ್

ಸಾಗರಾಳದಲ್ಲಿ ಹೃದಯಾದಾಕಾರದಲ್ಲಿ ಮೀನುಗಳ ಸಮೂಹದ ನಡುವೆ ಇದ್ದ ಶಾರ್ಕ್, ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಸ್ಟ್ರೇಲಿಯಾದ ಜಿಮ್ ಪಿಕಾಟ್ ಸೆರೆಹಿಡಿದಿರುವ ಈ ಚಿತ್ರವು ಏರಿಯಲ್ ಕೆಟಗರಿ ಆಫ್ ಡ್ರೋನ್ ಫೋಟೋ ಪ್ರಶಸ್ತಿಗೆ ಆಯ್ಕೆಯಾಗಿದೆ.

ಅಕ್ಟೋಬರ್ 24 ರಿಂದ ನವೆಂಬರ್ 29 ರವರೆಗೆ ಇಟಲಿಯಲ್ಲಿ ಪುರಾತನ ಸಂಗ್ರಹಾಲಯದಲ್ಲಿ ನಡೆಯಲಿರುವ ಸಿಯೇನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಇದಕ್ಕಾಗಿ ನಡೆದ ಸ್ಪರ್ಧೆಯಲ್ಲಿ 126 ಕ್ಕೂ ಹೆಚ್ಚು ದೇಶಗಳು ಮತ್ತು ಅತ್ಯುತ್ತಮ 45 ಛಾಯಾಗ್ರಾಹಕರು ಭಾಗಿಯಾಗಿದ್ದರು. ಎಲ್ಲರ ಫೋಟೋಗಳನ್ನು ಎಬವ್ ಅಸ್ ಓನ್ಲಿ ಸ್ಕೈ ಕೇಂದ್ರದಲ್ಲಿ ಪ್ರದರ್ಶಿಸಲಾಯಿತು.

ಈ ಪೈಕಿ ಆಸ್ಟ್ರೇಲಿಯಾದ ಜಿಮ್ ಪಿಕಾಟ್ ಗೆ ಮೊದಲ ಬಹುಮಾನ ಬಂದಿದ್ದರೆ, ಬಾಂಗ್ಲಾದೇಶದ ಅದ್ನಾನ್ ಆಸೀಫ್ ಚಿತ್ರಕ್ಕೆ ನಂತರದ ಬಹುಮಾನ ಒಲಿದಿದೆ.

ಡ್ರೋನ್ ನಲ್ಲಿ ಜಿಮ್ ಸೆರೆ ಹಿಡಿದ ಚಿತ್ರ ವೈರಲ್ ಕೂಡ ಆಗಿದೆ. ಸಾಗರದಾಳದಲ್ಲಿ ಮೀನುಗಳ ಸಮೂಹ ಹೃದಯಾಕಾರದಲ್ಲಿ ಕಾಣುತ್ತಿದ್ದರೆ, ಅದರ ಮಧ್ಯದಲ್ಲೊಂದು ಶಾರ್ಕ್ ಕೂಡ ಸೆರೆಯಾಗಿದೆ.

ಇನ್ನು ಅದ್ನಾನ್ ಆಸಿಫ್ ತೆಗೆದ ಚಿತ್ರದಲ್ಲಿ ವೃತ್ತಾಕಾರದಲ್ಲಿ ಮೊಸಳೆಗಳು ಇರುವುದು ಸೆರೆಯಾಗಿದೆ. ಎರಡೂ ಚಿತ್ರಗಳು ಏರಿಯಲ್ ಡ್ರೋನ್ ಮೂಲಕ ಸೆರೆಯಾಗಿರುವುದು ವಿಶೇಷ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...