alex Certify ಮದ್ಯದಂಗಡಿಗೆ ನುಗ್ಗಿದವನು ಮಾಡಿದ್ದೇನು ಅಂತ ತಿಳಿದ್ರೆ ದಂಗಾಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿಗೆ ನುಗ್ಗಿದವನು ಮಾಡಿದ್ದೇನು ಅಂತ ತಿಳಿದ್ರೆ ದಂಗಾಗ್ತೀರಾ…!

Man spends 4 days inside resto eating food, drinking boozeನ್ಯೂಯಾರ್ಕ್: ಲಾಕ್‌ಡೌನ್ ನಿಂದ‌ ಎಲ್ಲರಿಗಿಂತ ಹೆಚ್ಚು‌ ಕಷ್ಟವಾಗಿದ್ದು ಕುಡುಕರಿಗೆ. ಹಾಗಾಗಿ ಕಳೆದ ಕೆಲ ತಿಂಗಳಲ್ಲಿ ಅದೆಷ್ಟು ಎಣ್ಣೆ ಅಂಗಡಿಗಳಿಗೆ ಕನ್ನ‌ ಬಿದ್ದಿದೆಯೋ ಗೊತ್ತಿಲ್ಲ. ಅಮೇರಿಕಾದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.‌

ಲಾಕ್‌ಡೌನ್ ನಿಂದ ಸಂಕಷ್ಟಕ್ಕೊಳಗಾದ ಅಮೇರಿಕಾದ ಕನೆಕ್ಟಿಕಟ್ ರಾಜ್ಯದ 42 ವರ್ಷದ ಲೂಯೀಸ್ ಏಂಜಲ್ ಓರ್ತಿಝ್ ಎಂಬ ಕುಡುಕ ಮಹಾಶಯನೊಬ್ಬ ಅಲ್ಲಿನ ಕ್ರೌನ್ ಸ್ಟ್ರೀಟ್ ನ ಡೌನ್ ಟೌನ್ ರೆಸ್ಟೋರೆಂಟ್ ಬಾಗಿಲು ಮುರಿದು ಒಳ ನುಗ್ಗಿದ್ದಾನೆ. ಬಾಟಲು ಹಿಡಿದು ಹೊರ ಬಂದಿಲ್ಲ. ಅಲ್ಲೇ ವಾಸ ಮಾಡಿದ್ದಾನೆ.

ಒಂದಲ್ಲ, ಎರಡಲ್ಲ, ನಾಲ್ಕು ದಿನ. ಅಲ್ಲಿನ ನ್ಯೂ ಹೆವನ್ ಪೊಲೀಸ್ ಅಧಿಕಾರಿಗಳು ಹೋಗಿ ನೋಡಿದಾಗ ಆತ ಕುಡಿತದ ಅಮಲಿನಲ್ಲಿ ರಮ್ ಬಾಟಲೊಂದನ್ನು ಹಿಡಿದು ಮಲಗಿದ್ದ. ಒಟ್ಟಾರೆ ನಾಲ್ಕು ದಿನದಲ್ಲಿ 70 ಮದ್ಯದ ಬಾಟಲಿಗಳನ್ನು ಹಾಗೂ ತಿನಿಸುಗಳನ್ನು ಒರ್ತಿಝ್ ಖಾಲಿ‌ ಮಾಡಿದ್ದ ಎನ್ನಲಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...