alex Certify 6 ನೇ ಬಾರಿ ಕೃತಕ ಗರ್ಭಧಾರಣೆ ಯಶಸ್ವಿ, 49 ನೇ ವಯಸ್ಸಿನಲ್ಲಿ ಮಗು ಪಡೆದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ನೇ ಬಾರಿ ಕೃತಕ ಗರ್ಭಧಾರಣೆ ಯಶಸ್ವಿ, 49 ನೇ ವಯಸ್ಸಿನಲ್ಲಿ ಮಗು ಪಡೆದ ಮಹಿಳೆ

At age 48, woman gives birth to 'miracle' first child14 ವರ್ಷ ತಮ್ಮ ಕುಟುಂಬ ಪೂರ್ಣಗೊಳ್ಳಲು ಒಂದು ಮಗುವಿನ ನೀರಿಕ್ಷೆಯಲ್ಲಿದ್ದ ದಂಪತಿ, ಅಂತೂ ತಮ್ಮ ಆಸೆ ಈಡೇರಿದ ಖುಷಿಯಲ್ಲಿದ್ದಾರೆ. ಆಕೆಗೆ ಈಗಾಗಲೇ 49 ವರ್ಷ. 5 ಬಾರಿ ಕೃತಕ ಗರ್ಭಧಾರಣೆ ವಿಫಲವಾಗಿ, ತಮ್ಮ ಆಸೆಯನ್ನು ಬಿಡುವ ಹಂತದಲ್ಲಿದ್ದ ದಂಪತಿ 6 ನೇ ಕೃತಕ ಗರ್ಭಧಾರಣೆ ಯಲ್ಲಿ ಸಫಲರಾಗಿದ್ದಾರೆ. ಫಿಯೋನ ಮೆಕ್ ಕ್ಲಾಸ್ ಮತ್ತು ಡೇರೆನ್ ದಂಪತಿ 14 ವರ್ಷ ದ ನಂತರ ಹೆಣ್ಣುಮಗು ಪಡೆದ ಖುಷಿಯಲ್ಲಿ ಇದ್ದಾರೆ.

ಕೃತಕ ಗರ್ಭಧಾರಣೆಗೆ ದಂಪತಿ ಸುಮಾರು 50 ಸಾವಿರ ಡಾಲರ್ ಹಣ ವ್ಯಯಿಸಿದ್ದರು. 2014 ರಿಂದಲೇ ಅವರು ಮಗು ಪಡೆಯುವ ಪ್ರಯತ್ನ ನಡೆಸಿದ್ದರು. ಫಿಯೋನಾಗೆ ಒಮ್ಮೆ ಶಸ್ತ್ರ ಚಿಕಿತ್ಸೆಯೂ ಆಗಿತ್ತು.

“ನಮ್ಮ ಸಂಬಂಧಿಗಳು, ಗೆಳೆಯರು, ಆಸುಪಾಸಿನ ಜನರು ಎಲ್ಲರೂ ತಮ್ಮ ಮಗುವನ್ನು ಹೊಂದಿದ್ದರು. ನಮಗೂ ಮಗುವನ್ನು ಪಡೆಯಬೇಕೆಂಬ ಆಸೆ ಈಗ ಈಡೇರಿದೆ” ಎಂದು ಫಿಯೋನಾ ತಿಳಿಸಿದ್ದಾರೆ.

ತಮ್ಮ 45 ವರ್ಷಕ್ಕೆ ಋತುಸ್ರಾವದ ಸಮಸ್ಯೆ ಶುರುವಾಗಿದ್ದ ಕಾರಣ ಮತ್ತೆ ಅದಕ್ಕಾಗಿ ವಿಶೇಷ ಚಿಕಿತ್ಸೆ ಪಡೆದು ಮತ್ತೆ ಋತುಸ್ರಾವವಾಗುವಂತೆ ಮಾಡಲಾಗಿತ್ತು. 6 ಬಾರಿ ಕೃತಕ ಗರ್ಭಧಾರಣೆಯಿಂದ ನಾವು ಪಾಲಕರಾಗುವ ಭಾಗ್ಯ ಸಿಕ್ಕಿದೆ ಎಂದು ದಂಪತಿ ಸಂತಸ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...