alex Certify ಶೇಂಗಾ ತಿನ್ನಲು ಕಾದು ನಿಂತಿರುತ್ತೆ ಈ ಅಳಿಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇಂಗಾ ತಿನ್ನಲು ಕಾದು ನಿಂತಿರುತ್ತೆ ಈ ಅಳಿಲು…!

ಅಳಿಲುಗಳು ಜನ ನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಂಡರೂ ಸಹ ಜನರ ಕೈಗೆ ಸಿಗೋದಿಲ್ಲ. ಇವುಗಳ ಮುದ್ದಾದ ಮುಖವನ್ನ ನೋಡಿ ನೀವೇನಾದ್ರೂ ಅದನ್ನ ಹಿಡಿಯೋಕೆ ಹೋದರೆ ನಿಮ್ಮ ಪ್ರಯತ್ನ ವ್ಯರ್ಥವೇ ಸರಿ.

ಆದರೆ ಈ ಪುಟಾಣಿ ಅಳಿಲುಗಳೂ ಕೂಡ ಮನುಷ್ಯರನ್ನ ನಂಬುತ್ತವೆ ಅನ್ನೋದನ್ನ ತೋರಿಸುತ್ತೆ ಈ ಮುದ್ದಾದ ವಿಡಿಯೋ.

ಮನೆಯೊಂದರ ಕಿಟಕಿ ಬಳಿ ಬಂದು ಅಳಿಲೊಂದು ಕಾಯ್ತಿರುತ್ತೆ. ಮನೆಯ ಸದಸ್ಯ ಕಿಟಕಿ ಬಾಗಿಲು ತೆರೆದು ಶೇಂಗಾವನ್ನ ಕೊಡ್ತಿದ್ದಂತೆಯೇ ಅದನ್ನ ತೆಗೆದುಕೊಂಡು ಅಳಿಲು ಅಲ್ಲಿಂದ ಜಾಗ ಖಾಲಿ ಮಾಡುತ್ತೆ.

ಇದು ಪೋರ್ಟ್​ಲೆಂಡ್​ನ ಓರೆಗಾನ್​ನಲ್ಲಿ ಶೂಟ್​ ಆದ ವಿಡಿಯೋವಾಗಿದೆ. ಅಂದ ಹಾಗೆ ಅಳಿಲು ಪ್ರತಿದಿನ ಈ ಮನೆ ಕಿಟಕಿ ಹತ್ರ ಕೂತು ಒಂದು ಶೇಂಗಾಕ್ಕಾಗಿ ಕಾಯುತ್ತಂತೆ. ಐಎಫ್ಎಸ್​ ಅಧಿಕಾರಿ ಸುಸಾಂತಾ ನಂದಾ ಶೇರ್​ ಮಾಡಿರುವ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದ ಜನರ ಮನ ಗೆದ್ದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...