alex Certify ಅಪ್ಪನ ಮ್ಯಾಜಿಕ್‌ ನೋಡಿ ಬೆರಗಾದ ಮಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನ ಮ್ಯಾಜಿಕ್‌ ನೋಡಿ ಬೆರಗಾದ ಮಗಳು…!

ಮ್ಯಾಜಿಕ್ ಬಗ್ಗೆ ಮಕ್ಕಳಲ್ಲಿ ಅದೇನೋ ಒಂದು ಕುತೂಹಲ. ಮ್ಯಾಜಿಕ್ ಶೋ ಗಳೆಂದರೆ ಬಲು ಪ್ರೀತಿ. ತಾವು ಮ್ಯಾಜಿಕ್ ಮಾಡಬೇಕೆಂದು ಬಹುತೇಕ ಮಕ್ಕಳು ಆಸೆಪಡುತ್ತಾರೆ.

ಇಲ್ಲೊಂದು ಪ್ರಕರಣದಲ್ಲಿ ನಾಲ್ಕು ವರ್ಷದ ಮಗು ಮ್ಯಾಜಿಕ್ ದಂಡ ಹಿಡಿದು, ಅಬ್ರಕದಬ್ರ ಎನ್ನುತ್ತಾ ಚೆಂಡನ್ನು ಮಾಯ ಮಾಡಲು ಪ್ರಯತ್ನಿಸಿರುವ ವಿಡಿಯೋ ವೈರಲ್ ಆಗಿದೆ.

ತಾನು ಕೈಯಲ್ಲಿಡಿದ ಮ್ಯಾಜಿಕ್ ದಂಡದಿಂದಲೇ ಚಂಡು ಮಾಯವಾಗುತ್ತೆ ಎಂದು ನಂಬಿರುವ ಪುಟ್ಟ ಬಾಲಕಿ, ತನ್ನಪ್ಪನೆದುರು ಮ್ಯಾಜಿಕ್ ಮಾಡಬೇಕೆಂದು ಪ್ರಯತ್ನಿಸುತ್ತಾಳೆ.

ಲೋಟದೊಳಗೆ ಚಂಡಿಟ್ಟು ಅದನ್ನು ಮ್ಯಾಜಿಕ್ ಮೂಲಕ ಮಾಯ ಮಾಡುವ ಟ್ರಿಕ್ ಹೇಗೆ ಮಾಡಬೇಕೆಂದು ತಿಳಿಯದ ಮಗುವಿಗೆ ಅಪ್ಪ‌ ಮಾಡಿ ತೋರಿಸುತ್ತಾನೆ. ಅಪ್ಪ-ಮಗಳ ಮ್ಯಾಜಿಕ್ ಟ್ರಿಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೂರಾರು ಮಂದಿ ತಮ್ಮ ಅನುಭವಗಳನ್ನು ಸಹ ಈ ವಿಡಿಯೋ ಜೊತೆ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...