alex Certify ಅಂಬೆಗಾಲಿಡುವ ಮಗು ಮಾಡಿದ ಸಾಹಸ ಕಂಡು ಹುಬ್ಬೇರಿಸಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಬೆಗಾಲಿಡುವ ಮಗು ಮಾಡಿದ ಸಾಹಸ ಕಂಡು ಹುಬ್ಬೇರಿಸಿದ ನೆಟ್ಟಿಗರು

ಇನ್ನು ಅಂಬೆಗಾಲಿಡುವ ಆರು ತಿಂಗಳ ಬಾಲಕನೊಬ್ಬ ವೇಕ್ ಬೋರ್ಡಿಂಗ್ ಮಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾನೆ.

ಪಶ್ಚಿಮ ಅಮೆರಿಕಾದ ಉತಾಹ್ ನಲ್ಲಿರುವ ಸರೋವರದಲ್ಲಿ ನಡೆದ ಈ ಸಾಹಸದ ವಿಡಿಯೋವನ್ನು ಮಗುವಿನ‌ ಪೋಷಕರೇ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮಿಂಡಿ‌ ಮತ್ತು ಕ್ಯಾಸ್ಸಿ ಹಂಫ್ರೀಸ್ ಅವರು ಮಗುವಿನ‌ ಇನ್ ಸ್ಟಾ ಖಾತೆಯನ್ನು ನಿರ್ವಹಿಸುತ್ತಿದ್ದು, ಅವರೇ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಸರೋವರದಲ್ಲಿ ಯಾಂತ್ರಿಕ ದೋಣಿಗೆ ಕಟ್ಟಲಾದ ವೇಕ್ ಬೋರ್ಡ್‌ನಲ್ಲಿ ನಿಂತ ಮಗು ಅಂಜದೆ ಅಳುಕದೆ ಸಾಹಸ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಸಾವಿರಾರು ಮಂದಿ ವಿಡಿಯೋ ವೀಕ್ಷಿಸಿದ್ದು ಹುಬ್ಬೇರಿಸಿದ್ದಾರೆ. ಕೆಲವರು ಮಗುವಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...