alex Certify ಆಸ್ಪತ್ರೆ ಪಕ್ಕದ ಚರ್ಚ್ ನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೈದ್ಯ – ನರ್ಸ್ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆ ಪಕ್ಕದ ಚರ್ಚ್ ನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೈದ್ಯ – ನರ್ಸ್ ಜೋಡಿ

ಲಂಡನ್: ಇಂಗ್ಲೆಂಡ್ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ನಲ್ಲಿರುವ ಜೋಡಿಯೊಂದು ಆಸ್ಪತ್ರೆಗೆ ಹೊಂದಿಕೊಂಡಿರುವ ಚರ್ಚ್ ನಲ್ಲೇ ವಿವಾಹವಾಗಿದೆ.

ಜಾನ್ ಟಿಪ್ಪಿಂಗ್ ಮತ್ತು ಅನ್ನಾಳಂ ನವರತ್ನಂ ಅವರು ಬರುವ ಆಗಸ್ಟ್ ನಲ್ಲಿ ವಿವಾಹವಾಗಲು ಇಚ್ಛಿಸಿದ್ದರು.‌ ಆದರೆ, ಆಗಲೂ ಕರೋನಾ ವೈರಸ್ ಇರಬಹುದೆಂಬ ಕಾರಣದಿಂದ ಅವರ ಸಂಬಂಧಿಕರು ಉತ್ತರ ಐರ್ಲೆಂಡ್ ಮತ್ತು ಶ್ರೀಲಂಕಾದಿಂದ ಮದುವೆ ಸಮಾರಂಭಕ್ಕೆ ಬರಲಾಗುತ್ತದೆ ಎಂಬ ವಿಶ್ವಾಸವಿರಲಿಲ್ಲ. ಮೇಲಾಗಿ ವಧು, ವರ ಇಬ್ಬರೂ ಎನ್ಎಚ್ಎಸ್ ತುರ್ತು ಸೇವೆಯಲ್ಲಿ ಇರುವುದರಿಂದ ಸಮಯ ಸಿಗುತ್ತದೆ ಎಂದು ಹೇಳಲೂ ಆಗದು.

ಇದರಿಂದ ಇಬ್ಬರೂ ಮದುವೆ ಮುಂದೂಡುವ ಬದಲು ಲಂಡನ್ ನ ಸೇಂಟ್ ಥಾಮಸ್ ಆಸ್ಪತ್ರೆಗೆ ಹೊಂದಿಕೊಂಡಿರುವ ಚರ್ಚ್ ನಲ್ಲೇ ಸರಳ ವಿವಾಹವಾದರು.

ವಿವಾಹ ಸಮಾರಂಭದ ಲೈವ್ ಟೆಲಿಕಾಸ್ಟ್ ಮಾಡಲಾಗಿತ್ತು. “ಮನೆಯವರು ಮತ್ತು ಸ್ನೇಹಿತರು ಅಲ್ಲಿಂದಲೇ ವಿವಾಹ ನೋಡಿ, ಆಶೀರ್ವದಿಸಲಿ” ಎಂದು ಜಾನ್ ಟಿಪಿಂಗ್ ಹೇಳಿದ್ದಾರೆ.

ವಿವಾಹ ಸಮಾರಂಭದ ಫೋಟೋವನ್ನು ಗಯ್ಸ್ ಆ್ಯಂಡ್ ಸೇಂಟ್ ಥಾಮಸ್ ಎನ್ಎಚ್ಎಸ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಜೋಡಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...