alex Certify ಔಷಧಿ ಸಿಗ್ತಿದ್ದಂತೆ ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಅನ್‌ ಫಾಲೋ ಮಾಡಿದ ಅಮೆರಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಔಷಧಿ ಸಿಗ್ತಿದ್ದಂತೆ ಪ್ರಧಾನಿ ಮೋದಿ ಟ್ವಿಟ್ಟರ್‌ ಖಾತೆ ಅನ್‌ ಫಾಲೋ ಮಾಡಿದ ಅಮೆರಿಕಾ

ಚೀನಾದಿಂದ ಹರಡಿದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ದಂಗಾಗಿಸಿದೆ. ಕೊರೊನಾ ನಿಯಂತ್ರಣಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬೆಸ್ಟ್ ಎಂಬ ಮಾಹಿತಿ ಸಿಗ್ತಿದ್ದಂತೆ ಅಮೆರಿಕಾ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವಂತೆ ಭಾರತಕ್ಕೆ ಮನವಿ ಮಾಡಿತ್ತು. ಭಾರತ ಅಮೆರಿಕಾಕ್ಕೆ ಔಷಧಿ ಕಳುಹಿಸುತ್ತಿದ್ದಂತೆ ಶ್ವೇತ ಭವನ ಬಣ್ಣ ಬದಲಿಸಿದೆ.

ಔಷಧಿಗೆ ಬೇಡಿಕೆಯಿಟ್ಟಾಗ ವೈಟ್ ಹೌಸ್, ಪ್ರಧಾನಿ ಮೋದಿ ಸೇರಿದಂತೆ 6 ಟ್ವಿಟರ್ ಫಾಲೋ ಮಾಡಲು ಶುರು ಮಾಡಿತ್ತು. ಔಷಧಿ ಸಿಗ್ತಿದ್ದಂತೆ ಮೋದಿ ಸೇರಿ 6 ಟ್ವಿಟರ್ ಹ್ಯಾಂಡಲ್ ಗಳನ್ನು ಅನ್ ಫಾಲೋ ಮಾಡಿದೆ.

ಭಾರತದಲ್ಲಿ ತಯಾರಿಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಕೊರೊನಾಕ್ಕೆ ಒಳ್ಳೆ ಮದ್ದು ಎನ್ನಲಾಗಿದೆ. ವಿಜ್ಞಾನಿಗಳು ಈ ಬಗ್ಗೆ ಮಾಹಿತಿ ನೀಡ್ತಿದ್ದಂತೆ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಮೋದಿ ಜೊತೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಶ್ವೇತ ಭವನ ಭಾರತದ 6 ಟ್ವಿಟರ್ ಹ್ಯಾಂಡಲ್ ಫಾಲೋ ಮಾಡಲು ಶುರು ಮಾಡಿತ್ತು. ಇದ್ರಲ್ಲಿ ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರಪತಿ ಭವನ, ಅಮೆರಿಕದ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತದ ಅಮೆರಿಕದ ರಾಯಭಾರ ಕಚೇರಿ ಸೇರಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...