alex Certify 87 ನೇ ವಯಸ್ಸಿನಲ್ಲಿ ಸಂಗಾತಿಯನ್ನು ಹುಡುಕಿಕೊಂಡ ವೃದ್ಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

87 ನೇ ವಯಸ್ಸಿನಲ್ಲಿ ಸಂಗಾತಿಯನ್ನು ಹುಡುಕಿಕೊಂಡ ವೃದ್ಧೆ

ಕ್ಯಾಲಿಫೋರ್ನಿಯಾ: ಇದ್ದಷ್ಟು ದಿನ ಜೀವನವನ್ನು ಎಂಜಾಯ್ ಮಾಡಬೇಕು ಎಂಬುದು ಕೆಲವರ ಸಿದ್ಧಾಂತ. ಅದಕ್ಕಾಗಿ ಅವರು ಊರು ಏನು ಹೇಳುತ್ತದೆ ಎಂಬುದಕ್ಕೆ ತಲೆ ಕೆಡಿಸಿಕೊಳ್ಳುವವರಲ್ಲ. ಇಲ್ಲೊಬ್ಬ 87 ವರ್ಷದ ಅಜ್ಜಿ ತಮ್ಮ ಸಂಗಾತಿಯನ್ನು ಡೇಟಿಂಗ್ ಸೈಟ್ ಮೂಲಕ ಆರಿಸಿಕೊಂಡಿದ್ದು, ಈಕೆಯ ಜೀವನೋತ್ಸಾಹವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ಜೆನ್ ರೋಸೆನ್ ಎಂಬವರ ಪತಿ 2007ರಲ್ಲಿ ನಿಧನ ಹೊಂದಿದ್ದಾರೆ. ಅದಾಗಿ 13 ವರ್ಷಗಳ ನಂತರ ತಮಗೊಬ್ಬ ಸಂಗಾತಿ ಬೇಕು ಎಂದೆನಿಸಿದೆ. ಇದಕ್ಕೆ ಅವರ ಮೊಮ್ಮಗಳು ಕೇರ್ಲಿ ಸಹಾಯ ಮಾಡಿದ್ದು, ಮ್ಯಾಚ್.ಕಾಮ್ ವೆಬ್‌ಸೈಟ್ ಮೂಲಕ ವರನನ್ನು ಹುಡುಕಿದ್ದಾಳೆ.

ಕೊನೆಗೆ 84 ವರ್ಷದ ವಿಕ್ ವೈಟ್ ಎಂಬುವರು ಪ್ರತಿಕ್ರಿಯೆ ನೀಡಿದ್ದು, ವಿವಾಹವಾಗಿದ್ದಾರೆ. ಈಗ 4 ತಿಂಗಳ ನವದಂಪತಿ ಇವರಾಗಿದ್ದು, ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ.

ನಾವು ಮುಂದಿನ ದಿನಗಳನ್ನು ಸಂತೋಷದಿಂದ ಕಳೆಯುತ್ತೇವೆಂದು ಇವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದ್ದು, ವೃದ್ಧ ದಂಪತಿಗಳ ಜೀವನೋತ್ಸಾಹವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...