alex Certify 6 ತಿಂಗಳು ನೀರಿನಲ್ಲಿದ್ದರೂ ಮೊದಲಿನಂತೆ ವರ್ಕ್ ಆದ ಮೊಬೈಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ತಿಂಗಳು ನೀರಿನಲ್ಲಿದ್ದರೂ ಮೊದಲಿನಂತೆ ವರ್ಕ್ ಆದ ಮೊಬೈಲ್..!

ಸಾಮಾನ್ಯವಾಗಿ ಮೊಬೈಲ್ ನೀರಿನಲ್ಲಿ ಬಿದ್ದರೆ ಆ ಮೊಬೈಲ್ ಕಥೆ ಮುಗೀತು ಅಂತಾನೆ ಅರ್ಥ. ಏಕೆಂದರೆ ಒಮ್ಮೆ ನೀರಿನಲ್ಲಿ ಮೊಬೈಲ್ ಬಿದ್ದರೆ ಹಾಳಾಗಿ ಹೋಗುತ್ತವೆ. ಇದು ಅನೇಕರಿಗೆ ಆಗಿರುವ ಸ್ವ ಅನುಭವ. ಆದರೆ ಇಲ್ಲೊಂದು ಮೊಬೈಲ್ ನೀರಿಗೆ ಬಿದ್ದು ಆರು ತಿಂಗಳಾದರೂ ಏನೂ ಆಗಿಲ್ಲ. ಮೊದಲಿನಂತೆಯೇ ಕೆಲಸ ಮಾಡುತ್ತಿದೆಯಂತೆ.

ಮೀನು ಹಿಡಿಯಲು ಹೋಗಿ ತಮ್ಮ ಮೊಬೈಲ್‌ ನೀರಿನಲ್ಲಿ ಬೀಳಿಸಿಕೊಂಡಿದ್ದ ಚೀನಾ ಪ್ರವಾಸಿಗ ಜೌ ಎಂಬಾತ ಮರಳಿ ಮೊಬೈಲ್ ಪಡೆದುಕೊಂಡಿದ್ದಾರೆ. ಈ ಮೊಬೈಲ್ ಸುಮಾರು ಆರು ತಿಂಗಳ ಕಾಲ ನೀರಿನಲ್ಲಿಯೇ ಇತ್ತು ಎನ್ನಲಾಗಿದೆ. ನೀರಿನ ಪ್ರಮಾಣ ಕಡಿಮೆಯಾದಾಗ ಮೊಬೈಲ್ ಇನ್ನೊಬ್ಬ ಮೀನುಗಾರನಿಗೆ ಸಿಕ್ಕಿದ್ದು, ಆತ ಅದನ್ನು ಜೌ ಗೆ ಮರಳಿಸಿದ್ದಾನೆ.

ಆರು ತಿಂಗಳು ನೀರಿನಲ್ಲಿ ಇದ್ದರೂ ಮೊಬೈಲ್‌ಗೆ ಯಾವುದೇ ಹಾನಿಯಾಗಿಲ್ಲ. ಮೊದಲು ಯಾವ ರೀತಿ ವರ್ಕ್ ಆಗುತ್ತಿತ್ತೋ ಅದೇ ರೀತಿ ಇಂದಿಗೂ ಮೊಬೈಲ್ ವರ್ಕ್ ಆಗುತ್ತಿದೆ. ನಿಜಕ್ಕೂ ಇದು ಆಶ್ಚರ್ಯಕರ ಸಂಗತಿಯೇ ಸರಿ. ಮೊಬೈಲ್ ಹಿಂತಿರುಗಿಸಿದವರಿಗೆ ಜೌ ಧನ್ಯವಾದ ಹೇಳಿದ್ದಾರೆ.

ನನ್ನ ಮೊಬೈಲ್ ನೀರಿಗೆ ಯಾವಾಗ ಬಿತ್ತೋ ಆಗಲೇ ನಾನು ಆ ಮೊಬೈಲ್ ಮರೆತಿದ್ದೆ. ಆದರೆ ಮರಳಿ ಸಿಕ್ಕಿರುವುದು ಹಾಗೂ ಅದೇ ರೀತಿ ವರ್ಕ್ ಆಗುತ್ತಿರುವುದು ನಿಜಕ್ಕೂ ಆಶ್ಚರ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ ಜೌ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...