alex Certify ಚಿನ್ನದ ನಾಲಗೆ ಹೊಂದಿದ್ದ 2000 ವರ್ಷದ ಹಿಂದಿನ ʼಮಮ್ಮಿʼ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ನಾಲಗೆ ಹೊಂದಿದ್ದ 2000 ವರ್ಷದ ಹಿಂದಿನ ʼಮಮ್ಮಿʼ ಪತ್ತೆ

20000-year-old Mummy Discovered with a Gold Tongue That Would Help Him Talk in Afterlife

ಸಾವಿನ ಬಳಿಕವೂ ಜೀವನ ಇದೆ ಎಂದು ನಂಬಿದ್ದ ಪ್ರಾಚೀನ ಈಜಿಪ್ಷಿಯನ್ನರು ಮಮ್ಮಿ ಹೆಸರಿನ ವಿಶೇಷ ಸಮಾಧಿಗಳಲ್ಲಿ ಮೃತಪಟ್ಟವರನ್ನು ಹೂಳುತ್ತಿದ್ದ ವಿಷಯ ನಮ್ಮೆಲ್ಲರಿಗೂ ತಿಳಿದಿದೆ.

ಅದರಲ್ಲೂ ರಾಜ ಮನೆತನದ ಮಂದಿ ಮೃತಪಟ್ಟಲ್ಲಿ ಅವರ ದೇಹಗಳನ್ನು ಭಾರೀ ಸೌಕರ್ಯಗಳೊಂದಿಗೆ ಮಮ್ಮಿಗಳಲ್ಲಿ ಇಡಲಾಗುತ್ತಿತ್ತು.

ಬಾಯ್ ಫ್ರೆಂಡ್ ನಂಬಿ ಡೂಪ್ಲಿಕೇಟ್ ಕೀ ಕೊಟ್ಟು ಇಂಗು ತಿಂದ ಮಂಗನಂತಾದ ಯುವತಿ

ಇಂಥ ಒಂದು ಮಮ್ಮಿ ಪತ್ತೆಯಾಗಿದ್ದು, ಅದರಲ್ಲಿ ಇರುವ ದೇಹವನ್ನು ಚಿನ್ನದ ನಾಲಿಗೆಯೊಂದಿಗೆ ಮಣ್ಣು ಮಾಡಲಾಗಿತ್ತು. ಸಾವಿನ ಬಳಿಕದ ಬದುಕಿನಲ್ಲಿ ದೇವತೆಗಳೊಂದಿಗೆ ಸಂವಹನ ನಡೆಸಲು ಎಂದು 2000 ವರ್ಷ ಹಳೆಯ ಈ ದೇಹಕ್ಕೆ ಚಿನ್ನದ ನಾಲಿಗೆ ಅಳವಡಿಸಲಾಗಿದೆ ಎನ್ನಲಾಗಿದೆ.

ಟಪೋಸಿರಿಸ್ ಮಾಗ್ನಾ ಎಂಬ ಊರಿನಲ್ಲಿ ಈ ಮಮ್ಮಿಯನ್ನು ತೆರೆದು ನೋಡಲಾಗಿದೆ. ಈ ಜಾಗದಲ್ಲಿ ದೇವತೆ ಒಸಿರಿಸ್ ಹಾಗೂ ಐಸಿಸ್‌ರ ದೇಗುಲಗಳು ಇವೆ. ಈ ಒಸಿರಿಸ್ ದೇವತೆಯೊಂದಿಗೆ ಮೃತಪಟ್ಟ ವ್ಯಕ್ತಿ ತನ್ನ ಸಾವಿನ ನಂತರದ ಜೀವನದಲ್ಲಿ ಮಾತನಾಡಲು ಅನುವಾಗಲೆಂದು ಈ ಚಿನ್ನದ ನಾಲಿಗೆ ಅಳವಡಿಸಲಾಗಿದೆ ಎಂದು ಈಜಿಪ್ಟ್‌ನ ಪುರಾತತ್ವ ಸಚಿವಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...