alex Certify ಅಮೆರಿಕ – ಮೆಕ್ಸಿಕೋ ಗಡಿಯಲ್ಲಿ ಸುಟ್ಟ ಕರಕಲಾದ 19 ಮೃತದೇಹಗಳು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ – ಮೆಕ್ಸಿಕೋ ಗಡಿಯಲ್ಲಿ ಸುಟ್ಟ ಕರಕಲಾದ 19 ಮೃತದೇಹಗಳು ಪತ್ತೆ

ಇತ್ತೀಚಿನ ವರ್ಷಗಳಲ್ಲಿ ಹಿಂಸಾತ್ಮಕ ಪ್ರಾದೇಶಿಕ ವಿವಾದಗಳನ್ನ ಕಾಣುತ್ತಿರುವ ಟೆಕ್ಸಾಸ್​​ನ ರಿಯೋ ಗ್ರಾಂಡೆ ಪಟ್ಟಣದ ಬಳಿಯಲ್ಲಿ ಸುಟ್ಟು ಕರಕಲಾದ 19 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಮೆಕ್ಸಿಕನ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ಯಾಮಾರ್ಗೋ ಹೊರಗಿನ ಕಚ್ಚಾ ರಸ್ತೆಯಲ್ಲಿ ಶವಗಳನ್ನ ಪತ್ತೆ ಮಾಡಲಾಗಿದೆ ಎಂದು ತಮೌಲಿಪಾಸ್​ ಸ್ಟೇಟ್​ ಪ್ರಾಸಿಕ್ಯೂಟರ್​​ ಕಚೇರಿ ಮಾಹಿತಿ ನೀಡಿದೆ. ಈ ರಸ್ತೆಯಲ್ಲಿ ಎರಡು ವಾಹನಗಳಲ್ಲಿ ಬೆಂಕಿ ಹತ್ತಿ ಉರಿಯುತ್ತಿತ್ತು. ಒಂದು ಗಾಡಿಯಲ್ಲಿ ನಾಲ್ಕು ಮೃತದೇಹಗಳು ಸಿಕ್ಕಿದ್ರೆ ಇನ್ನೊಂದು ವಾಹನದಲ್ಲಿ 15 ಮಂದಿಯ ಮೃತದೇಹ ಪತ್ತೆಯಾಗಿದೆ.

ಮೃತರಾದವರನ್ನೆಲ್ಲ ಬೇರೆ ಎಲ್ಲೋ ಕೊಂದು ಇಲ್ಲಿ ಸುಡಲಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಘಟನೆ ಶುಕ್ರವಾರದಂದೇ ನಡೆದಿದ್ದು ಜನ ಅದನ್ನ ಬಹಿರಂಗ ಮಾಡಲು ಹೆದರಿದ್ದರು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...