alex Certify ವೈರಸ್ ನಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಸ್ ನಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿದ ಮಹಿಳೆ

ಮಾರಕ ಕರೋನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಬಳಸುವ ಬದಲು ವಿಶಿಷ್ಟ ಹೆಲ್ಮೆಟ್ ಧರಿಸಿದ ಮಹಿಳೆ ಈಗ ಸುದ್ದಿಯಾಗಿದ್ದಾಳೆ.‌ ಕೆನ್ಲಿ ಹೋಗಾನ್ ಪೇಂಟರ್ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಣ್ಣ ವಿಡಿಯೋ ಹಂಚಿಕೊಂಡಿದ್ದಾರೆ.‌

ಸಂಪೂರ್ಣ ‌ಮುಖವನ್ನು ಮುಚ್ಚುವ ಗ್ಲಾಸ್ ನ ಹೆಲ್ಮೆಟ್ ಇದಾಗಿದ್ದು, ಮಾರುಕಟ್ಟೆಗೆ ಹೋಗುವಾಗ ಇದನ್ನು ಬಳಸುತ್ತೇನೆ. ಹೋಗಿ ಬಂದ ನಂತರ ತೊಳೆಯುತ್ತೇನೆ ಎಂದಿದ್ದಾರೆ.

ಮಾರ್ಕೆಟ್ ನಲ್ಲಿ ಕೆಲವರು ನನ್ನನ್ನು ನೋಡಿ ನಕ್ಕರು. ಆದರೆ, ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಪೇಂಟರ್ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆಗಳು ಲಭ್ಯವಾಗುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...