alex Certify ಯಾರಾಗಲಿದ್ದಾರೆ ಉತ್ತರ ಕೊರಿಯಾ ಸರ್ವಾಧಿಕಾರಿಯ ಉತ್ತರಾಧಿಕಾರಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರಾಗಲಿದ್ದಾರೆ ಉತ್ತರ ಕೊರಿಯಾ ಸರ್ವಾಧಿಕಾರಿಯ ಉತ್ತರಾಧಿಕಾರಿ…?

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿವೆ. ಅನಾರೋಗ್ಯದಿಂದ ಬಳಲುತ್ತಿದ್ದ 36 ವರ್ಷದ ಕಿಮ್ ಜಾಂಗ್ ಉನ್ ಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಿಮ್ ಜಾಂಗ್ ಉನ್ ಸ್ಥಿತಿ ಗಂಭೀರವಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಆದರೆ ಆತ ಎಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಮಾತ್ರ ಬಹಿರಂಗವಾಗಿಲ್ಲ. ಉತ್ತರ ಕೋರಿಯಾ ಮಾಧ್ಯಮಗಳು ಮಾತ್ರ ಎಂದಿನಂತೆ ಸಾಧನೆ ವರದಿಗಳನ್ನು ಪ್ರಕಟಿಸುತ್ತಿವೆ.

ಇದರ ಮಧ್ಯೆ ಕಿಮ್ ಜಾಂಗ್ ಉನ್ ಉತ್ತರಾಧಿಕಾರಿ ಕುರಿತು ಚರ್ಚೆ ನಡೆದಿದ್ದು, ಆತನ ಪುತ್ರರು ಇನ್ನೂ ಚಿಕ್ಕವರಾಗಿರುವ ಕಾರಣ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈವರೆಗೆ ಸಹೋದರನ ಆಡಳಿತಾವಧಿಯಲ್ಲಿ ಕಿಮ್‌ ಯೋ ಜಾಂಗ್ ಪ್ರಮುಖ ಪಾತ್ರ ವಹಿಸುತ್ತಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...